alex Certify ಕಾಮದ ಮದದಲ್ಲಿ ಶಾಪಿಂಗ್ ಮಾಲ್ ನಲ್ಲಿಯೇ ಮಹಿಳೆಯ ಹಸ್ತಮೈಥುನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಮದ ಮದದಲ್ಲಿ ಶಾಪಿಂಗ್ ಮಾಲ್ ನಲ್ಲಿಯೇ ಮಹಿಳೆಯ ಹಸ್ತಮೈಥುನ

ಚೈನಾದ ಐಕೆಇಎ ಮಳಿಗೆಯೊಳಗೆ ಮಹಿಳೆಯೊಬ್ಬಳು ಹಸ್ತಮೈಥುನ ಮಾಡಿಕೊಳ್ಳುವ ವಿಡಿಯೋ ಕ್ಲಿಪ್ ವೈರಲ್ ಆಗಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ.

ಇದೇ ವೇಳೆ, ಬಹುರಾಷ್ಟ್ರೀಯ ಪಿಠೋಪಕರಣಗಳ ಕಂಪೆನಿ ಐಕೆಇಎ ಇದೀಗ ಎಚ್ಚೆತ್ತುಕೊಂಡಿದ್ದು, ಇನ್ನು ಮುಂದೆ ಹೆಚ್ಚು ಎಚ್ಚರಿಕೆಯಿಂದ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

ವಿಡಿಯೋ ಕ್ಲಿಪ್ಪನ್ನು ವಿವಿಧ ಅಶ್ಲೀಲ ವೆಬ್ ಸೈಟ್ ಗಳು ಹಂಚಿಕೊಂಡಿದ್ದು, ಐಕೆಇಎ ಶೋ ರೂಂ‌ ಒಂದರಲ್ಲಿ ವಿವಿಧ ಸೋಫಾ ಹಾಸಿಗೆ ಮೇಲೆ ಮಹಿಳೆಯೊಬ್ಬರು ತನ್ನನ್ನು ಸಂತೋಷ ಪಡಿಕೊಳ್ಳುವುದನ್ನು ತೋರುವಂತಿದೆ. ಎಎಫ್ಪಿ ವರದಿ ಪ್ರಕಾರ ಕ್ಲಿಪ್ ನ ಸೆನ್ಸಾರ್ ಮಾಡದ ಆವೃತ್ತಿಗಳನ್ನು ಚೀನಾದ ಸಾಮಾಜಿಕ ಸಾಮಾಜಿಕ ಮಾಧ್ಯಮಗಳಿಂದ ತೆಗೆದುಹಾಕಲಾಗಿದೆ.

ನಾವು ಈ ನಡವಳಿಕೆಯನ್ನು ವಿರೋಧಿಸುತ್ತೇವೆ ಮತ್ತು ಪೊಲೀಸರಿಗೂ ವರದಿ ಮಾಡಿದ್ದೇವೆ ಎಂದು ಕಂಪನಿ ಹೇಳಿದೆ. ಐಕೆಇಎಯಲ್ಲಿ ಈ ರೀತಿ ಕ್ಲಿಪ್ ಹರಿದಾಡಿದ್ದು ಇದೇ ಮೊದಲಲ್ಲ. 2019ರಲ್ಲಿ ಹಾಂಕಾಂಗ್ ಕಾಸ್ ವೇ ಕೊಲ್ಲಿಯಲ್ಲಿರುವ ಮಳಿಗೆಯಲ್ಲಿ ದೊಡ್ಡ ಪರದೆ ಮೇಲೆ ಅಶ್ಲೀಲ ಕ್ಲಿಪ್ ಪ್ರದರ್ಶನ ಕಂಡಿತ್ತು. ವ್ಯಕ್ತಿಯೊಬ್ಬ ಹಸ್ತಮೈಥುನ ಮಾಡಿಕೊಂಡ ವಿಡಿಯೋವನ್ನು ಅಂಗಡಿಯಲ್ಲಿ ಹಾಜರಿದ್ದ ಅನೇಕ ಕುಟುಂಬಗಳು ಹಾಗೂ ಮಕ್ಕಳು ವೀಕ್ಷಿಸುವಂತಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...