alex Certify ಬಿಗ್ ನ್ಯೂಸ್: ಪಾಕ್ ಪ್ರಧಾನಿ ಇಮ್ರಾನ್ ಕುರಿತು ಶಾಕಿಂಗ್ ಸಂಗತಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಗ್ ನ್ಯೂಸ್: ಪಾಕ್ ಪ್ರಧಾನಿ ಇಮ್ರಾನ್ ಕುರಿತು ಶಾಕಿಂಗ್ ಸಂಗತಿ ಬಹಿರಂಗ

ಮಾಜಿ ಕ್ರಿಕೆಟಿಗ ಸರ್ಫರಾಜ್​ ನವಾಜ್​ ಪಾಕಿಸ್ತಾನದ ಪ್ರಧಾನಿ ಇಮ್ರಾನ್​ ಖಾನ್ ಡ್ರಗ್​ ವ್ಯಸನಿ ಆಗಿದ್ದರು ಎಂದು ಆರೋಪಿಸಿದ್ದಾರೆ. ಇಮ್ರಾನ್​ ಖಾನ್​ 1987ರಲ್ಲಿ ಡ್ರಗ್​ ಸೇವನೆ ಮಾಡಿದ್ದರು ಅಂತಾ ಸರ್ಫರಾಜ್​ ಆರೋಪ ಮಾಡಿದ್ದಾರೆ.

1987ರಲ್ಲಿ ನಡೆದ ಘಟನೆಯನ್ನ ನೆನೆಪಿಸಿಕೊಂಡ ಸರ್ಫರಾಜ್​, ಪಾಕಿಸ್ತಾನ ಹಾಗೂ ಇಂಗ್ಲೆಂಡ್​ ನಡುವಿನ ಪಂದ್ಯದಲ್ಲಿ ಇಮ್ರಾನ್​ ಖಾನ್​ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಇದರಿಂದ ಬೇಸರಗೊಂಡಿದ್ದ ಇಮ್ರಾನ್​ ಇಸ್ಲಾಮಾಬಾದ್​ ನಿವಾಸಕ್ಕೆ ಬಂದು ಡ್ರಗ್​ ಸೇವಿಸಿದ್ದರು ಅಂತಾ ಹೇಳಿದ್ದಾರೆ.

ಇಮ್ರಾನ್​ ಖಾನ್​ ಕೊಕೇನ್​ ಸೇವನೆ ಮಾಡಿದ್ದಾರೆ. ಇದನ್ನ ನಾನು ಕಣ್ಣಾರೆ ನೋಡಿದ್ದೇನೆ. ಇಮ್ರಾನ್​ ಖಾನ್​ರನ್ನ ನನ್ನ ಮುಂದೆ ಕರೆತನ್ನಿ. ಈ ಆರೋಪವನ್ನ ಅವರು ನಿರಾಕರಿಸುತ್ತಾರೆಯೇ ಎಂಬುದನ್ನ ನೋಡೋಣ. ಇಮ್ರಾನ್​ ಖಾನ್​ ಡ್ರಗ್​ ವ್ಯಸನಿಯಾಗಿದ್ದರು ಅಂತಾ ಹೇಳೋಕೆ ನಾನೊಬ್ಬನೇ ಪ್ರತ್ಯಕ್ಷದರ್ಶಿಯಲ್ಲ. ಬದಲಾಗಿ ಲಂಡನ್​ನಲ್ಲೂ ಅನೇಕರಿದ್ದಾರೆ ಅಂತಾ ಹೇಳಿದ್ರು.

ಇಮ್ರಾನ್​ ಖಾನ್​ ಹಾಗೂ ಸರ್ಫರಾಜ್​ ನವಾಜ್​ 1970 ಹಾಗೂ 1980 ದಶಕಗಳಲ್ಲಿ ಪಾಕಿಸ್ತಾನ ತಂಡದ ಅಗ್ರಗಣ್ಯ ಬೌಲರ್​ಗಳಾಗಿದ್ದರು ಅನ್ನೋದನ್ನ ನಾವಿಲ್ಲಿ ಸ್ಮರಿಸಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...