ಮಾಜಿ ಕ್ರಿಕೆಟಿಗ ಸರ್ಫರಾಜ್ ನವಾಜ್ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಡ್ರಗ್ ವ್ಯಸನಿ ಆಗಿದ್ದರು ಎಂದು ಆರೋಪಿಸಿದ್ದಾರೆ. ಇಮ್ರಾನ್ ಖಾನ್ 1987ರಲ್ಲಿ ಡ್ರಗ್ ಸೇವನೆ ಮಾಡಿದ್ದರು ಅಂತಾ ಸರ್ಫರಾಜ್ ಆರೋಪ ಮಾಡಿದ್ದಾರೆ.
1987ರಲ್ಲಿ ನಡೆದ ಘಟನೆಯನ್ನ ನೆನೆಪಿಸಿಕೊಂಡ ಸರ್ಫರಾಜ್, ಪಾಕಿಸ್ತಾನ ಹಾಗೂ ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ ಇಮ್ರಾನ್ ಖಾನ್ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಇದರಿಂದ ಬೇಸರಗೊಂಡಿದ್ದ ಇಮ್ರಾನ್ ಇಸ್ಲಾಮಾಬಾದ್ ನಿವಾಸಕ್ಕೆ ಬಂದು ಡ್ರಗ್ ಸೇವಿಸಿದ್ದರು ಅಂತಾ ಹೇಳಿದ್ದಾರೆ.
ಇಮ್ರಾನ್ ಖಾನ್ ಕೊಕೇನ್ ಸೇವನೆ ಮಾಡಿದ್ದಾರೆ. ಇದನ್ನ ನಾನು ಕಣ್ಣಾರೆ ನೋಡಿದ್ದೇನೆ. ಇಮ್ರಾನ್ ಖಾನ್ರನ್ನ ನನ್ನ ಮುಂದೆ ಕರೆತನ್ನಿ. ಈ ಆರೋಪವನ್ನ ಅವರು ನಿರಾಕರಿಸುತ್ತಾರೆಯೇ ಎಂಬುದನ್ನ ನೋಡೋಣ. ಇಮ್ರಾನ್ ಖಾನ್ ಡ್ರಗ್ ವ್ಯಸನಿಯಾಗಿದ್ದರು ಅಂತಾ ಹೇಳೋಕೆ ನಾನೊಬ್ಬನೇ ಪ್ರತ್ಯಕ್ಷದರ್ಶಿಯಲ್ಲ. ಬದಲಾಗಿ ಲಂಡನ್ನಲ್ಲೂ ಅನೇಕರಿದ್ದಾರೆ ಅಂತಾ ಹೇಳಿದ್ರು.
ಇಮ್ರಾನ್ ಖಾನ್ ಹಾಗೂ ಸರ್ಫರಾಜ್ ನವಾಜ್ 1970 ಹಾಗೂ 1980 ದಶಕಗಳಲ್ಲಿ ಪಾಕಿಸ್ತಾನ ತಂಡದ ಅಗ್ರಗಣ್ಯ ಬೌಲರ್ಗಳಾಗಿದ್ದರು ಅನ್ನೋದನ್ನ ನಾವಿಲ್ಲಿ ಸ್ಮರಿಸಬಹುದು.