
ಲಂಡನ್ನಲ್ಲಿ ವಾಸಿಸುತ್ತಿರುವ ಪಾಕಿಸ್ತಾನ ಮೂಲದ ವ್ಯಕ್ತಿಯೊಬ್ಬರು ತಮ್ಮ ಪುತ್ರ ಕನ್ನಡಕ ಧರಿಸಲು ನಿರಾಕರಿಸುತ್ತಿರೋದರ ಬಗ್ಗೆ ಟ್ವಿಟರ್ನಲ್ಲಿ ಹಂಚಿಕೊಂಡಿದ್ದರು. ಅಲ್ಲದೇ ತಮ್ಮ ಮಗ ಮುಸಾ ಈ ರೀತಿ ಏಕೆ ಮಾಡ್ತಿದ್ದಾನೆ ಅನ್ನೋದಕ್ಕೂ ಕಾರಣ ನೀಡಿದ್ದರು.
ಮುಸಾ ಕನ್ನಡಕ ಧರಿಸಿದ್ದ ಕಾರಣಕ್ಕೆ ಆತನ ಸಹಪಾಠಿಗಳು ಅವನನ್ನ ಆಡಿಕೊಂಡಿದ್ದರಂತೆ. ಹೀಗಾಗಿ ಆತ ಕನ್ನಡಕ ಧರಿಸಲು ನಿರಾಕರಿಸುತ್ತಿದ್ದ. ಆದ್ದರಿಂದ ಮುಸಾ ತಂದೆ ಪುತ್ರನ ಫೋಟೋವನ್ನ ಶೇರ್ ಮಾಡಿ ತಮ್ಮ ಪುತ್ರನಿಗೆ ಆತ್ಮಸ್ಥೈರ್ಯ ತುಂಬಿ ಎಂದು ಹೇಳಿದ್ದರು.
ಜೀವದ ಹಂಗು ತೊರೆದು ನೀರಿಗೆ ಹಾರಿ ಕಂದಮ್ಮನನ್ನ ರಕ್ಷಿಸಿದ ಪರೋಪಕಾರಿ
ಈತ ನನ್ನ ಪುತ್ರ ಮುಸಾ, ಕನ್ನಡಕದಲ್ಲಿ ನೀನು ಕೆಟ್ಟದಾಗಿ ಕಾಣುತ್ತಿ ಎಂದು ಸ್ನೇಹಿತ ಹೇಳಿದ್ದರಿಂದ ನನ್ನ ಮಗ ಕೆಲ ದಿನಗಳಿಂದ ದುಃಖಿತನಾಗಿದ್ದಾನೆ. ಈಗ ಆತ ಕನ್ನಡಕ ಧರಿಸಲು ಹಿಂದೇಟು ಹಾಕುತ್ತಿದ್ದಾನೆ. ಹೀಗಾಗಿ ನಾನು ನೀನು ಈ ಬಗ್ಗೆ ಇಡೀ ವಿಶ್ವದ ಸಲಹೆಯನ್ನ ಪಡೆದುಕೋ ಎಂದು ಹೇಳಿದೆ. ನೀವೇ ಹೇಳಿ ಇವನು ಕನ್ನಡಕದಲ್ಲಿ ಚೆನ್ನಾಗಿ ಕಾಣುತ್ತಾನೆ ಅಲ್ಲವೇ ಎಂದು ಶೀರ್ಷಿಕೆ ನೀಡಿದ್ದರು.
ಮುಸಾ ತಂದೆಯ ಈ ಪೋಸ್ಟ್ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿದ್ದು ಕಮೆಂಟ್ ಸೆಕ್ಷನ್ನಲ್ಲಿ ನೆಟ್ಟಿಗರು ಪ್ರೀತಿಯ ಸುರಿಮಳೆಗೈದಿದ್ದಾರೆ. ಕನ್ನಡಕದಲ್ಲಿ ನೀನು ತುಂಬಾನೇ ಸುಂದರವಾಗಿ ಕಾಣುತ್ತೀಯಾ ಎಂದು ಹೇಳುವ ಮೂಲಕ ಮುಸಾಗೆ ಧೈರ್ಯ ತುಂಬಿದ್ದಾರೆ. ನೆಟ್ಟಿಗರ ಪ್ರೀತಿಗೆ ಮುಸಾ ವಿಡಿಯೋ ಮೂಲಕ ಧನ್ಯವಾದ ತಿಳಿಸಿದ್ದಾನೆ.