alex Certify ಫುಟ್ಬಾಲ್ ಹುಡುಕಿಕೊಟ್ಟ ಮಹಿಳೆಗೆ ಮಕ್ಕಳ ಸರ್ಪ್ರೈಸ್ ಗಿಫ್ಟ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫುಟ್ಬಾಲ್ ಹುಡುಕಿಕೊಟ್ಟ ಮಹಿಳೆಗೆ ಮಕ್ಕಳ ಸರ್ಪ್ರೈಸ್ ಗಿಫ್ಟ್….!

ಮಕ್ಕಳು ಕಳೆದುಕೊಂಡ ಫುಟ್ಬಾಲ್ ಅನ್ನು ಹುಡುಕಿ ಕೊಟ್ಟ ಮಹಿಳೆ ವಿಶೇಷ ಕಾರಣಕ್ಕೆ ಅಂತರ್ಜಾಲದಲ್ಲಿ ಸುದ್ದಿಯಾಗಿದ್ದಾರೆ.

ಒಡಹುಟ್ಟಿದ ಇಬ್ಬರು ಮಕ್ಕಳು ಆಡುವ ವೇಳೆ ಅವರ ಫುಟ್ಬಾಲ್ ಕಿರು ಉದ್ಯಾನದಲ್ಲಿ ಕಳೆದಿತ್ತು. ಡಾಲಿ ಎಂಬಾಕೆ ಈ ಬಾಲನ್ನು ಹುಡುಕಿ ಕೊಟ್ಟಿದ್ದರು. ಕತೆ ಇಲ್ಲಿಗೆ ಮುಗಿಯಲಿಲ್ಲ.

ಆ ಮಕ್ಕಳು‌ ವಾರದ ಬಳಿಕ ಆಕೆಯ ಮನೆ ಮುಂದೆ ಎರಡು ಚಾಕೋಲೇಟ್ ಗಳನ್ನು ಉಡುಗೊರೆ ರೂಪದಲ್ಲಿ ಇಟ್ಟು, ಮಿಸ್ ಲೇಡಿ ಎಂದು ಸಂಭೋದಿಸಿದ ಪತ್ರದಲ್ಲಿ, ಕಳೆದ ವಾರ ನಿಮ್ಮ ಉದ್ಯಾನದಲ್ಲಿ ನಮ್ಮ ಫುಟ್ಬಾಲ್ ಹುಡುಕಿ ಕೊಡಲು ಸಹಾಯ ಮಾಡಿದ್ದಕ್ಕಾಗಿ ಧನ್ಯವಾದಗಳು. ಪುಟ್ಬಾಲ್ ಪಂದ್ಯಾವಳಿಗೆ ಈ ಬಾಲ್ ಅಗತ್ಯವಾಗಿತ್ತು, ನಮಗೆ ಆ ಬಾಲ್ ಸಿಗದೇ ಹೋಗಿದ್ದರೆ ಕಷ್ಟವಾಗುತ್ತಿತ್ತು ಎಂದು ಒಕ್ಕಣೆ ಪತ್ರದಲ್ಲಿತ್ತು.

10 ವರ್ಷದ ಬಾಲಕಿ ಮಾಡಿದ ಕೆಲಸ ನೋಡಿದ್ರೆ ಶಾಕ್‌ ಆಗ್ತೀರಾ…..!

ಈ ಅನಿರೀಕ್ಷಿತ ಉಡುಗೊರೆಯನ್ನು ನೋಡಿದ ಡಾಲಿ ಅದರ ಫೋಟೋವನ್ನು ಟ್ವಿಟರ್ ನಲ್ಲಿ ಅಳುವ ಎಂಒಜಿಯೊಂದಿಗೆ ಪೋಸ್ಟ್ ಮಾಡಿದ್ದರು.

ಈ ಭಾವನಾತ್ಮಕ ಪೋಸ್ಟ್ ನೆಟ್ಟಿಗರ ಮನಗೆದ್ದಿತ್ತು. ಆಕೆ ಪೋಸ್ಟ್ ಮಾಡಿದ ಬಳಿಕ 5000 ರಿಟ್ವೀಟ್ ಆಗಿದ್ದು, 73 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದರು. ಟಿವಿ ಜಾಹೀರಾತಿನ ಪ್ರೇರಣೆಯಿಂದ ಈ ಘಟನೆ ಎಂದು ಕೆಲವೊಬ್ಬರು ಉಲ್ಲೇಖಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...