ಮಕ್ಕಳು ಕಳೆದುಕೊಂಡ ಫುಟ್ಬಾಲ್ ಅನ್ನು ಹುಡುಕಿ ಕೊಟ್ಟ ಮಹಿಳೆ ವಿಶೇಷ ಕಾರಣಕ್ಕೆ ಅಂತರ್ಜಾಲದಲ್ಲಿ ಸುದ್ದಿಯಾಗಿದ್ದಾರೆ.
ಒಡಹುಟ್ಟಿದ ಇಬ್ಬರು ಮಕ್ಕಳು ಆಡುವ ವೇಳೆ ಅವರ ಫುಟ್ಬಾಲ್ ಕಿರು ಉದ್ಯಾನದಲ್ಲಿ ಕಳೆದಿತ್ತು. ಡಾಲಿ ಎಂಬಾಕೆ ಈ ಬಾಲನ್ನು ಹುಡುಕಿ ಕೊಟ್ಟಿದ್ದರು. ಕತೆ ಇಲ್ಲಿಗೆ ಮುಗಿಯಲಿಲ್ಲ.
ಆ ಮಕ್ಕಳು ವಾರದ ಬಳಿಕ ಆಕೆಯ ಮನೆ ಮುಂದೆ ಎರಡು ಚಾಕೋಲೇಟ್ ಗಳನ್ನು ಉಡುಗೊರೆ ರೂಪದಲ್ಲಿ ಇಟ್ಟು, ಮಿಸ್ ಲೇಡಿ ಎಂದು ಸಂಭೋದಿಸಿದ ಪತ್ರದಲ್ಲಿ, ಕಳೆದ ವಾರ ನಿಮ್ಮ ಉದ್ಯಾನದಲ್ಲಿ ನಮ್ಮ ಫುಟ್ಬಾಲ್ ಹುಡುಕಿ ಕೊಡಲು ಸಹಾಯ ಮಾಡಿದ್ದಕ್ಕಾಗಿ ಧನ್ಯವಾದಗಳು. ಪುಟ್ಬಾಲ್ ಪಂದ್ಯಾವಳಿಗೆ ಈ ಬಾಲ್ ಅಗತ್ಯವಾಗಿತ್ತು, ನಮಗೆ ಆ ಬಾಲ್ ಸಿಗದೇ ಹೋಗಿದ್ದರೆ ಕಷ್ಟವಾಗುತ್ತಿತ್ತು ಎಂದು ಒಕ್ಕಣೆ ಪತ್ರದಲ್ಲಿತ್ತು.
10 ವರ್ಷದ ಬಾಲಕಿ ಮಾಡಿದ ಕೆಲಸ ನೋಡಿದ್ರೆ ಶಾಕ್ ಆಗ್ತೀರಾ…..!
ಈ ಅನಿರೀಕ್ಷಿತ ಉಡುಗೊರೆಯನ್ನು ನೋಡಿದ ಡಾಲಿ ಅದರ ಫೋಟೋವನ್ನು ಟ್ವಿಟರ್ ನಲ್ಲಿ ಅಳುವ ಎಂಒಜಿಯೊಂದಿಗೆ ಪೋಸ್ಟ್ ಮಾಡಿದ್ದರು.
ಈ ಭಾವನಾತ್ಮಕ ಪೋಸ್ಟ್ ನೆಟ್ಟಿಗರ ಮನಗೆದ್ದಿತ್ತು. ಆಕೆ ಪೋಸ್ಟ್ ಮಾಡಿದ ಬಳಿಕ 5000 ರಿಟ್ವೀಟ್ ಆಗಿದ್ದು, 73 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದರು. ಟಿವಿ ಜಾಹೀರಾತಿನ ಪ್ರೇರಣೆಯಿಂದ ಈ ಘಟನೆ ಎಂದು ಕೆಲವೊಬ್ಬರು ಉಲ್ಲೇಖಿಸಿದ್ದಾರೆ.