ಎಸ್ಟೋನಿಯಾದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗಿದ್ದು ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ಪ್ರಧಾನ ಮಂತ್ರಿ ಸ್ಥಾನವನ್ನ ಅಲಂಕರಿಸಿದ್ದಾರೆ. 15 ಸಂಸದೀಯ ಮಂತ್ರಿಮಂಡಲಕ್ಕೆ 43 ವರ್ಷದ ವಕೀಲೆ ಹಾಗೂ ಪೂರ್ವ ಯೂರೋಪಿಯ ಸಂಸದೆ ಕಾಜಾ ಕಲಾಸ್ ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿದ್ರು. ದೇಶದ ರಾಷ್ಟ್ರಪತಿ ಕೇಸ್ರ್ಟಿ ಕಾಲಜುಲೈದ್ ಪ್ರಮಾಣವಚನ ಭೋದಿಸಿದ್ರು.
ʼಆಧಾರ್ʼ ಕಾರ್ಡ್ನಲ್ಲಿ ಫೋಟೋ ಬದಲಾಯಿಸಬೇಕೇ..? ಇಲ್ಲಿದೆ ಸಂಪೂರ್ಣ ಮಾಹಿತಿ
1991ರಲ್ಲಿ ಸ್ವಾತಂತ್ರ್ಯವನ್ನ ಪಡೆದ ಬಳಿಕ ಎಸ್ಟೋನಿಯಾದಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯನ್ನ ಪ್ರಧಾನ ಮಂತ್ರಿ ಸ್ಥಾನಕ್ಕೆ ಏರಿಸಲಾಗಿದೆ. ಪ್ರಧಾನ ಮಂತ್ರಿ ಸ್ಥಾನವನ್ನ ಅಲಂಕರಿಸುತ್ತಿದ್ದಂತೆಯೇ ಕಾಜಾ ಕಲಾಸ್ 2 ವರ್ಷಗಳ ಬಳಿಕ ಬಾಲ್ಟಿಕ್ ರಾಷ್ಟ್ರದ ಪ್ರತಿಷ್ಠೆಯನ್ನ ಇನ್ನಷ್ಟು ಹೆಚ್ಚಿಸೋದಾಗಿ ಪ್ರಮಾಣ ಮಾಡಿದ್ದಾರೆ. ಕಾಜಾ ಕಲಾಸ್ ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿದ ಬಳಿ ನಾವು ಇನ್ನೊಮ್ಮೆ ನಮ್ಮ ಸಹೋದ್ಯೋಗಿ, ನಮ್ಮ ನೆರೆಹೊರೆಯ ರಾಷ್ಟ್ರಗಳ ಜೊತೆ ಉತ್ತಮ ಸಂಬಂಧ ನಿರ್ಮಾಣ ಮಾಡುತ್ತೇವೆ. ಅಲ್ಲದೇ ವಿಶ್ವದ ಎದುರು ಉತ್ತಮ ರಾಷ್ಟ್ರವಾಗಿ ಹೊರಹೊಮ್ಮಲು ಎಲ್ಲಾ ರೀತಿಯ ಪ್ರಯತ್ನ ಮಾಡೋದಾಗಿ ಅಭಯ ನೀಡಿದ್ರು.
ಎಸ್ಟೋನಿಯಾದ ಹಿಂದಿನ ಪ್ರಧಾನ ಮಂತ್ರಿ ಜ್ಯೂರಿ ರತಾಸ್ ಭ್ರಷ್ಟಾಚಾರ ಆರೋಪ ಹೊಂದಿದ್ದರಿಂದ ಪ್ರಧಾನಿ ಸ್ಥಾನದಿಂದ ಕೆಳಗಿಳಿದಿದ್ದಾರೆ. ಅವರು ತಮ್ಮ ರಾಜೀನಾಮೆ ಪತ್ರವನ್ನ ರಾಷ್ಟ್ರಪತಿ ಕಲಜುಮೈದ್ಗೆ ಹಸ್ತಾಂತರಿಸಿದ್ರು. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ರು. ಹೊಸ ಮಂತ್ರಿಮಂಡಲ ರಚನೆ ವೇಳೆ ಕಲಾಸ್ ಲಿಂಗ ಸಮಾನತೆಗೆ ಪ್ರಾಮುಖ್ಯತೆ ನೀಡಿದ್ದಾರೆ. ವಿತ್ತ ಮಂತ್ರಿ ಸ್ಥಾನ, ವಿದೇಶಾಂಗ ಮಂತ್ರಿ ಸ್ಥಾನವನ್ನೂ ಮಹಿಳೆಯರಿಗೆ ನೀಡಲಾಗಿದೆ.
ವಿದ್ಯಾರ್ಥಿನಿಯರಿಗಿರಬೇಕು ಬಾಯ್ ಫ್ರೆಂಡ್ ಎಂಬ ನೋಟೀಸ್ ಹೊರಡಿಸಿತ್ತಾ ಈ ಕಾಲೇಜ್…? ಇಲ್ಲಿದೆ ವೈರಲ್ ಆದ ಸುದ್ದಿ ಹಿಂದಿನ ಸತ್ಯ
ಇನ್ನೊಂದು ಕುತೂಹಲಕಾರಿ ವಿಚಾರ ಅಂದ್ರೆ 1.3 ಮಿಲಿಯನ್ ಜನಸಂಖ್ಯೆಯನ್ನ ಹೊಂದಿರುವ ಎಸ್ಟೋನಿಯಾದಲ್ಲಿ ರಾಷ್ಟ್ರಪತಿ ಹಾಗೂ ಪ್ರಧಾನ ಮಂತ್ರಿಗಳೆಂಬ ಎರಡು ಉನ್ನತ ಸ್ಥಾನವನ್ನ ಮಹಿಳೆಯರಿಗೇ ನೀಡಲಾಗಿದೆ. ಪ್ರಧಾನ ಮಂತ್ರಿ ಸ್ಥಾನದಲ್ಲಿ ಕಾಜಾ ಕಲಾಸ್ ಇದ್ದರೆ ರಾಷ್ಟ್ರಪತಿ ಸ್ಥಾನದಲ್ಲಿ ಮಹಿಳೆ ಕ್ರೇಸ್ಟಿ ಕಾಲಜುಲೈದ್ ಸೇವೆ ಸಲ್ಲಿಸುತ್ತಿದ್ದಾರೆ. ಈ ಮೂಲಕ ಪ್ರಸ್ತುತ ಮಹಿಳಾ ರಾಷ್ಟ್ರಪತಿ ಹಾಗೂ ಮಹಿಳಾ ಪ್ರಧಾನ ಮಂತ್ರಿಯನ್ನ ಹೊಂದಿರುವ ವಿಶ್ವದ ಏಕೈಕ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಈ ದೇಶ ಪಾತ್ರವಾಗಿದೆ.