alex Certify ವಿದ್ಯಾರ್ಥಿನಿಯರಿಗಿರಬೇಕು ಬಾಯ್‌ ಫ್ರೆಂಡ್‌ ಎಂಬ ನೋಟೀಸ್‌ ಹೊರಡಿಸಿತ್ತಾ ಈ ಕಾಲೇಜ್…?‌ ಇಲ್ಲಿದೆ ವೈರಲ್ ಆದ‌ ಸುದ್ದಿ ಹಿಂದಿನ ಸತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದ್ಯಾರ್ಥಿನಿಯರಿಗಿರಬೇಕು ಬಾಯ್‌ ಫ್ರೆಂಡ್‌ ಎಂಬ ನೋಟೀಸ್‌ ಹೊರಡಿಸಿತ್ತಾ ಈ ಕಾಲೇಜ್…?‌ ಇಲ್ಲಿದೆ ವೈರಲ್ ಆದ‌ ಸುದ್ದಿ ಹಿಂದಿನ ಸತ್ಯ

ಆಗ್ರಾದ ಕಾಲೇಜೊಂದು ಹೊರಡಿಸಿದೆ ಎನ್ನಲಾದ ವ್ಯಾಲಂಟೈನ್​ ಡೇ ಸಂಬಂಧಿ ನೋಟಿಸ್​ ಒಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.
ಸೇಂಟ್​ ಜಾನ್ಸ್ ಕಾಲೇಜು ಆಗ್ರಾಗೆ ಸೇರಿದ್ದು ಎನ್ನಲಾದ ಈ ನೋಟಿಸ್​​ನಲ್ಲಿ , ಫೆಬ್ರವರಿ 14ನೇ ತಾರೀಖಿನಂದು ಕಾಲೇಜಿನ ಪ್ರತಿ ವಿದ್ಯಾರ್ಥಿನಿ ಕನಿಷ್ಟ ಒಂದಾದರೂ ಬಾಯ್ ​ಫ್ರೆಂಡ್​ನ್ನು ಹೊಂದಿರಬೇಕು ಎಂದು ಉಲ್ಲೇಖಿಸಲಾಗಿದೆ. ಅಲ್ಲದೇ ಈ ನೋಟಿಸ್​ನಲ್ಲಿ ಕಾಲೇಜಿನ ಹೆಸರು ಹಾಗೂ ಪ್ರಾಂಶುಪಾಲರ ಡಿಜಿಟಲ್​ ಸಹಿ ಕೂಡ ಇದೆ.

ಸರ್ಕಾರಿ ನೌಕರರಿಗೆ ಕೇಂದ್ರದಿಂದ ಮತ್ತೊಂದು ಗುಡ್ ನ್ಯೂಸ್: LTC ಬದಲಾವಣೆ, ರದ್ದತಿ ಶುಲ್ಕ ಮರು ಪಾವತಿ

ಭದ್ರತಾ ಕಾರಣದಿಂದಾಗಿ ಈ ನೋಟಿಸ್​ ತರಲಾಗಿದೆ. ಸಿಂಗಲ್​ ವಿದ್ಯಾರ್ಥಿನಿಯರಿಗೆ ಕಾಲೇಜಿನೊಳಕ್ಕೆ ಪ್ರವೇಶ ಇರೋದಿಲ್ಲ. ಪ್ರತಿ ವಿದ್ಯಾರ್ಥಿನಿಯರು ತಮ್ಮ ಬಾಯ್​ಫ್ರೆಂಡ್​ ಜೊತೆಗಿರುವ ಇತ್ತೀಚಿನ ಫೋಟೋವನ್ನ ತೋರಿಸತಕ್ಕದ್ದು. ಪ್ರೀತಿಯನ್ನ ಹಂಚಿ ಎಂದು ನೋಟಿಸ್​ನಲ್ಲಿ ಬರೆಯಲಾಗಿದೆ. ಈ ನೋಟಿಸ್​ ಮೇಲೆ ಪ್ರೊ. ಆಶಿಷ್​ ಶರ್ಮಾ, ಅಸೋಸಿಯೇಟ್ ಡೀನ್​ರ ಡಿಜಿಟಲ್​ ಸಹಿ ಕೂಡ ಇದೆ.

ಈ ನೋಟಿಸ್​ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದ್ದಂತೆಯೇ ಕಾಲೇಜು ಪ್ರಾಂಶುಪಾಲ ಎಸ್​.ಪಿ. ಸಿಂಗ್​ ಸ್ಪಷ್ಟನೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗ್ತಿರುವ ನೋಟಿಸ್​ ದುಷ್ಕರ್ಮಿಗಳ ಕೃತ್ಯವಾಗಿದೆ. ಕಾಲೇಜಿನ ಪ್ರತಿಷ್ಠೆಗೆ ಭಂಗ ತರುವ ಸಲುವಾಗಿ ಈ ಕೃತ್ಯ ಎಸಗಲಾಗಿದೆ. ಈ ನೋಟಿಸ್​ಗೂ ಕಾಲೇಜಿಗೂ ಯಾವುದೇ ಸಂಬಂಧ ಇಲ್ಲ ಎಂದಿದ್ದಾರೆ.

— ASParsh! ❄️ (@ASP_009) January 27, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...