alex Certify ಬ್ರಿಟನ್‌ನಲ್ಲಿ ಕಾಣಿಸಿಕೊಂಡ ಸೌದಿ ಮೂಲದ ಶವಪೆಟ್ಟಿಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ರಿಟನ್‌ನಲ್ಲಿ ಕಾಣಿಸಿಕೊಂಡ ಸೌದಿ ಮೂಲದ ಶವಪೆಟ್ಟಿಗೆ

ಬೆಳಿಗ್ಗೆ ಬೆಳಿಗ್ಗೆ ವಾಕಿಂಗ್‌ಗೆ ಹೋಗುತ್ತಿರುವ ಸಂದರ್ಭದಲ್ಲಿ ನಿಮ್ಮ ಕಣ್ಣಿಗೆ ಶವಪೆಟ್ಟಿಗೆಯೊಂದು ಮಾರ್ಗಮಧ್ಯದಲ್ಲಿ ಕಂಡರೆ ಹೇಗಾಗುತ್ತದೆ? ಶಾಕ್ ಆಗುತ್ತದಲ್ಲವೇ?

ಬಾಕ್ಸಿಂಗ್ ಡೇ ಮುಂಜಾನೆ ವಾಕಿಂಗ್‌ಗೆ ಹೊರಟಿದ್ದ ವ್ಯಕ್ತಿಯೊಬ್ಬರು ಖಾಲಿ ಶವಪೆಟ್ಟಿಗೆಯೊಂದನ್ನು ಕಂಡು ಶಾಕ್ ಆಗಿದ್ದಾರೆ. ಪ್ರವಾಹದ ನೀರಿನಲ್ಲಿ ತೇಲಿಕೊಂಡು ಬಂದಿದ್ದ ಈ ಶವಪೆಟ್ಟಿಗೆ ಅಲ್ಲಿಗೆ ಬಂದು ಬಿದ್ದಿತ್ತು.

ನಾರ್ಥಾಂಪ್ಟನ್‌ನ ಅಬಿಂಗ್ಟನ್ ಮೆಡೋಸ್‌ನಲ್ಲಿ ವಾಕಿಂಗ್ ಮಾಡುತ್ತಿದ್ದ ರಸೆಲ್ ಮೂರ್‌ ಹಾಗು ಅವರ ಸಹೋದರಿ ಈ ಪೆಟ್ಟಿಗೆಯನ್ನು ಕಂಡಾಗ ಅದರ ಮೇಲೆ ಅರೇಬಿಕ್ ಭಾಷೆಯ ಅಕ್ಷರಗಳು ಕಂಡಿವೆ.

ಸೌದಿ ಅರೇಬಿಯಾದ ಆರೋಗ್ಯ ಇಲಾಖೆಗೆ ಸೇರಿದ ಶವಪೆಟ್ಟಿಗೆ ಇದಾಗಿದೆ ಎಂದು ತಿಳಿದು ಬಂದಿದೆ. ನೆನೆ ನದಿಯ ಪ್ರವಾಹದಲ್ಲಿ ಈ ಪೆಟ್ಟಿಗೆ ಕೊಚ್ಚಿಕೊಂಡು ಬಂದು ಇಲ್ಲಿ ಬಿದ್ದಿದೆ. ಈ ಶವಪೆಟ್ಟಿಗೆ ಬ್ರಿಟನ್‌ಗೆ ಹೇಗೆ ಬಂದು ಸೇರಿದೆ ಎಂದು ತಿಳಿದು ಬಂದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...