ಕೌಲಾಲಂಪುರ: ಮಲೇಷ್ಯಾದಲ್ಲಿ ಕೋವಿಡ್ ಕಾರಣ ಮುಂದಿನ ಆಗಸ್ಟ್ ವರೆಗೂ ಮೆಡಿಕಲ್ ಎಮರ್ಜೆನ್ಸಿ ಘೋಷಿಸಲಾಗಿದೆ. ಅಲ್ಲಿನ ಪಾರ್ಲಿಮೆಂಟ್ ನ್ನು ಅಮಾನತು ಮಾಡಲಾಗಿದೆ. ಸಾರ್ವತ್ರಿಕ ಚುನಾವಣೆಯನ್ನು ಮುಂದೂಡಲಾಗಿದೆ.
ಕೋವಿಡ್ ನಿಯಂತ್ರಣಕ್ಕಾಗಿ ಮಾಡಿದ ಈ ಕಾರ್ಯಕ್ಕೆ ಟೀಕೆಯೂ ವ್ಯಕ್ತವಾಗಿದೆ. ಮುಯಿದ್ದೀನ್ ಯಾಸಿನ್ ತಮ್ಮ ಅಧಿಕಾರ ಮುಂದುವರಿಸಲು ಈ ರಾಜಕೀಯ ನಡೆ ವಹಿಸಿದ್ದಾರೆ ಎಂಬ ಆರೋಪ ಪ್ರತಿಪಕ್ಷಗಳಿಂದ ಕೇಳಿ ಬಂದಿದೆ.
ಆಗಸ್ಟ್ 1 ರವರೆಗೂ ಮೆಡಿಕಲ್ ಎಮರ್ಜೆನ್ಸಿ ಘೋಷಿಸುವ ಪಿಎಂ ಪ್ರಸ್ತಾವಕ್ಕೆ ರಾಜ ಸುಲ್ತಾನ್ ಅಬ್ದುಲ್ಲಾ ಸುಲ್ತಾನ್ ಅಹಮದ್ ಶಹಾ ಸೋಮವಾರ ಅನುಮೋದನೆ ನೀಡಿದ್ದಾರೆ. ಯಾವುದೇ ಮಿಲಿಟರಿ ಆಡಳಿತ ಹೇರುವುದಿಲ್ಲ. ಕರ್ಪ್ಯೂ ಹಾಕುವುದಿಲ್ಲ ಎಂದು ರಾಜ ಮುಯಿದ್ದೀನ್ ಹೇಳಿದ್ದಾರೆ.