
ಅಮೆಜಾನ್ ಮುಖ್ಯಸ್ಥ ಜೆಫ್ ಬೆಜೋಸ್ರನ್ನ ಹಿಂದಿಕ್ಕಿದ ಟೆಸ್ಲಾ ಹಾಗೂ ಸ್ಪೇಸ್ ಎಕ್ಸ್ ಕಂಪನಿ ಸಿಇಒ ಎಲೋನ್ ಮಸ್ಕ್ ವಿಶ್ವದ ಅತ್ಯಂತ ಶ್ರೀಮಂತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದು ಅಮೆರಿಕ ಮಾಧ್ಯಮಗಳು ವರದಿ ಮಾಡಿವೆ.
ಕಳಪೆ ಪ್ರದರ್ಶನದಿಂದಾಗಿ ಒಮ್ಮೆ ಟೆಸ್ಲಾ ಕಂಪನಿಯನ್ನ ಮಾರಾಟ ಮಾಡೋಕೆ ನಿರ್ಧರಿಸಿದ್ದ ಮಸ್ಕ್ ಇದೀಗ ಇದೇ ಕಂಪನಿಯ ನಾಗಾಲೋಟದಿಂದ ಈ ಸಾಧನೆ ಮಾಡಿದ್ದಾರೆ. ಗುರುವಾರ ಟೆಸ್ಲಾ ಷೇರು ಶೇಕಡಾ 4.8 ಮೇಲೆರಿದ್ದು ಈ ಮೂಲಕ ದಕ್ಷಿಣ ಆಫ್ರಿಕಾ ಮೂಲದ ಮಸ್ಕ್ ಆಸ್ತಿ 188.5 ಬಿಲಿಯನ್ ಡಾಲರ್ ತಲುಪಿದೆ. ಈ ಆಸ್ತಿಯು ಅಮೆಜಾನ್ ಮುಖ್ಯಸ್ಥ ಜೆಫ್ ಬೆಜೋಸ್ರ ಆಸ್ತಿಗಿಂತ 1.5 ಬಿಲಿಯನ್ ಡಾಲರ್ ಹೆಚ್ಚಿದೆ ಎಂದು ಹೇಳಲಾಗಿದೆ.
ಶ್ರೀಮಂತರ ಸಾಲಿನಲ್ಲಿ ಮೊದಲ ಸ್ಥಾನ ಪಡೆದಿರುವ ಮಸ್ಕ್, ಎಷ್ಟು ವಿಚಿತ್ರ ಅಂತಾ ಆಶ್ಚರ್ಯಕರ ರೀತಿಯಲ್ಲಿ ಟ್ವೀಟ್ ಮಾಡಿದ್ದಾರೆ. ಮತ್ತೊಂದು ಟ್ವೀಟ್ನಲ್ಲಿ ‘ಸರಿ, ಕೆಲಸಕ್ಕೆ ಹಿಂತಿರುಗುವಾ….!’ ಎಂದು ಬರೆದುಕೊಂಡಿದ್ದಾರೆ. ಇಂತಹ ದೊಡ್ಡ ಪಟ್ಟ ಅಲಂಕರಿಸಿದರೂ ಸಾಮಾನ್ಯರಂತೆ ವರ್ತಿಸಿದ ಮಸ್ಕ್ರ ಟ್ವೀಟ್ಗೆ ಸಾಕಷ್ಟು ರಿಟ್ವೀಟ್ಗಳು ಹರಿದು ಬರ್ತಿವೆ.