alex Certify ಖಡ್ಗ ಮೃಗ ಬೆದರಿಸಲು ಕೋಲೆತ್ತಿಕೊಂಡು ಬಂದ ಆನೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖಡ್ಗ ಮೃಗ ಬೆದರಿಸಲು ಕೋಲೆತ್ತಿಕೊಂಡು ಬಂದ ಆನೆ….!

ಆನೆ ಹಾಗೂ ಖಡ್ಗಮೃಗದ ನಡುವಿನ ಕಿತ್ತಾಟದ ಆಸಕ್ತಿದಾಯಕ ವಿಡಿಯೋ ಕ್ಲಿಪ್ ಒಂದು ವೈರಲ್ ಆಗಿದೆ. ಸಿಟ್ಟಿನಿಂದ ನುಗ್ಗಿಬರುವ ಖಡ್ಗಮೃಗವನ್ನು ಆನೆ ಯಾವ ರೀತಿ ಹಿಮ್ಮೆಟ್ಟಿಸುತ್ತದೆ ಎಂಬುದೇ ಈ ವಿಡಿಯೋದ ವಿಶೇಷ.

ಎರಡು ಪ್ರಾಣಿಗಳು ಕಾಡಿನ ಬಯಲು ಪ್ರದೇಶದಲ್ಲಿ ಆಹಾರ ಅರಸುತ್ತಾ ಸಾಗುತ್ತಿರುತ್ತವೆ. ಈ ವೇಳೆ ಎರಡೂ ಮುಖಾಮುಖಿಯಾಗುವ ಸಂದರ್ಭ ಎದುರಾಗುತ್ತದೆ.

ಈ ವೇಳೆ ಅಲ್ಲೇ ಬಿದ್ದಿದ್ದ ಕೋಲಿನ ರೂಪದ ಮರದ ಪುಟ್ಟ ಕೊಂಬೆಯನ್ನು ಸೊಂಡಿಲಿನಿಂದ ಎತ್ತಿಕೊಂಡ ಆನೆ, ಖಡ್ಗಮೃಗದತ್ತ ಧಾವಿಸುತ್ತದೆ. ತಾನೇನೂ ಕಮ್ಮಿಯಿಲ್ಲ ಎಂದು ಆನೆಯನ್ನು ಎದುರಿಸಲು ಖಡ್ಗಮೃಗ ಕೂಡ ಮುಂದಾಗುತ್ತದೆ. ಆನೆ ಮಾತ್ರ ಸಿಟ್ಟಿನಿಂದ ಕೋಲನ್ನು ಎದುರಾಳಿಯತ್ತ ಎಸೆದು ಹೂಂಕರಿಸುವ ಮೂಲಕ ಬೆದರಿಸುವುದನ್ನು ವಿಡಿಯೋದಲ್ಲಿ ಕಾಣಬಹುದು.

2017ರಲ್ಲಿ ಯುಟ್ಯೂಬ್ ಚಾನೆಲ್ ಒಂದು ಈ ವಿಡಿಯೋ ಪ್ರಕಟಿಸಿತ್ತು. ಇದೀಗ ಐಎಫ್ಎಸ್ ಅಧಿಕಾರಿ ಸುಶಾಂತಾನಂದ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡು ನೆಟ್ಟಿಗರ ಗಮನ ಸೆಳೆಯುವಂತೆ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...