alex Certify ರಕ್ಷಣಾ ಹೆಲಿಕಾಪ್ಟರ್‌ ನಲ್ಲಿ ಗಿರಕಿ ಹೊಡೆದಿದ್ದ ವೃದ್ದೆಯಿಂದ ಈಗ ಪರಿಹಾರಕ್ಕೆ ಮನವಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಕ್ಷಣಾ ಹೆಲಿಕಾಪ್ಟರ್‌ ನಲ್ಲಿ ಗಿರಕಿ ಹೊಡೆದಿದ್ದ ವೃದ್ದೆಯಿಂದ ಈಗ ಪರಿಹಾರಕ್ಕೆ ಮನವಿ

ರಕ್ಷಣಾ ಹೆಲಿಕಾಪ್ಟರ್‌ ಒಂದಕ್ಕೆ ಕಟ್ಟಿದ್ದ ಸ್ಟ್ರೆಚರ್‌ ಒಂದರಲ್ಲಿ 74 ವರ್ಷದ ವೃದ್ಧೆಯೊಬ್ಬರು ಇದ್ದಂತೆಯೇ ಅದು ಗಿರಗಿರನೇ ತಿರುಗಿದ ವಿಡಿಯೋ ಒಂದು ಕಳೆದ ವರ್ಷ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿತ್ತು.

ಗುಡ್ಡವೊಂದನ್ನು ಏರುವ ವೇಳೆ ಗಾಯಗೊಂಡ ಕಟಲಿನ್ ಹೆಸರಿನ ಆ ಮಹಿಳೆಯನ್ನು ಫೀನಿಕ್ಸ್ ಅಗ್ನಿಶಾಮಕ ದಳವು ಹಾಗೆ ಹೊತ್ತುಕೊಂಡು ಸುರಕ್ಷಿತ ಜಾಗವೊಂದಕ್ಕೆ ಕರೆದೊಯ್ಯುತ್ತಿರುವುದಾಗಿ ಬಳಿಕ ತಿಳಿದುಬಂದಿತ್ತು. ಆ ಸ್ಟೋಕ್ಸ್‌ ಬುಟ್ಟಿಗೆ ಕಟ್ಟಲಾಗಿದ್ದ ಹಗ್ಗದ ವ್ಯವಸ್ಥೆಯಲ್ಲಿ ಆದ ದೋಷದ ಕಾರಣ ಈ ರೀತಿ ಆಗಿದೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದರು.

ಕಾರ್ಯಾಚರಣೆ ವೇಳೆ ಆದ ಈ ಪ್ರಮಾದದಿಂದಾಗಿ ಆ ಸ್ಟೋಕ್ಸ್ ಬುಟ್ಟಿಯು 174 ಬಾರಿ ಗಿರಕಿ ಹೊಡೆದು ಕಟಲಿನ್‌ಗೆ ಮಣಿಕಟ್ಟು ಹಾಗೂ ಸೊಂಟದಲ್ಲಿ ಗಾಯಗಳಾಗಿದ್ದವು. ಆ ಘಟನೆ ನಡೆದು ಒಂದು ವರ್ಷ ಕಳೆದ ಬಳಿಕ, ಕಟಲಿನ್‌ ಇದೀಗ ಆ ಮಟ್ಟದ ನಿರ್ಲಕ್ಷ್ಯ ಭರಿತ ರಕ್ಷಣಾ ಕಾರ್ಯಾಚರಣೆ ವಿರುದ್ಧ ದೂರು ಸಲ್ಲಿಸಿ $2 ದಶಲಕ್ಷ ಪರಿಹಾರ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...