ಆಗಸ್ಟ್ 4ರಂದು ಲೆಬನಾನ್‌ನ ಬೈರೂತ್‌ನಲ್ಲಿ ಸಂಭವಿಸಿದ ಸ್ಫೊಟದಲ್ಲಿ ನೂರಾರು ಮಂದಿ ತಮ್ಮ ಪ್ರಾಣ ಕಳೆದುಕೊಂಡು, ಆ ದೇಶದ ಇತಿಹಾಸದ ಅತ್ಯಂತ ನೋವಿನ ಅಧ್ಯಾಯಯಗಳಲ್ಲಿ ಒಂದಾಗಿದೆ.
ಇದೀಗ ಯೊಲಾಂಡೆ ಲಬಾಕಿ ಹೆಸರಿನ ಹಿರಿಯ ಮಹಿಳೆಯೊಬ್ಬರು ಈ ಸ್ಫೋಟದಲ್ಲಿ ಮೃತಪಟ್ಟ ಪುಟಾಣಿ ಹೆಣ್ಣು ಮಕ್ಕಳ ಸ್ಮರಣಾರ್ಥ ಬೊಂಬೆಗಳನ್ನು ಮಾಡಿದ್ದಾರೆ. ವೃತ್ತಿಯಲ್ಲಿ ಕಲಾವಿದೆಯಾದ ಯೊಲಾಂಡೆ ಆಗಸ್ಟ್ 5ರಿಂದಲೂ ಸಹ ಮುಂಜಾನೆ ಬೆಳಿಗ್ಗೆ ಎದ್ದ ಕೂಡಲೇ ಈ ಬೊಂಬೆಗಳನ್ನು ಮಾಡುವಲ್ಲಿ ನಿರತರಾಗಿದ್ದಾರೆ. ಇದುವರೆಗೂ ಅವರು 77 ಬೊಂಬೆಗಳನ್ನು ತಯಾರಿಸಿದ್ದಾರೆ.
ಯೊಲಾಂಡೆ ಇನ್ನೂ 23 ಬೊಂಬೆಗಳನ್ನು ತಯಾರಿಸುವವರಿದ್ದು, ಸ್ಫೋಟದಲ್ಲಿ ಮೃತಪಟ್ಟ ಪ್ರತಿಯೊಂದು ಹೆಣ್ಣು ಮಗುವಿನ ಹೆಸರನ್ನೂ ಒಂದೊಂದು ಬೊಂಬೆಯ ಮೇಲೆ ಬರೆಯುತ್ತಾ ಬಂದಿದ್ದಾರೆ.
https://www.facebook.com/akramnehme/posts/10164381427585055