ಮಕ್ಕಳನ್ನ ಅದರಲ್ಲೂ ಪುಟಾಣಿ ಕಂದಮ್ಮಗಳನ್ನ ಎಷ್ಟು ಜೋಪಾನವಾಗಿ ನೋಡಿಕೊಂಡ್ರುನೂ ಕಡಿಮೇನೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಡಿಯೋ ನೋಡ್ತಿದ್ರೆ ಮಕ್ಕಳನ್ನ ಜೋಪಾನ ಮಾಡೋದು ಹೀಗಾ ಎಂಬ ಪ್ರಶ್ನೆ ಮೂಡದೇ ಇರದು.
ಮೂರು ಸೆಕೆಂಡ್ ಅವಧಿಯ ಈ ವಿಡಿಯೋದಲ್ಲಿ ವೃದ್ಧೆಯೊಬ್ಬಳು ಮಗುವನ್ನ ಹಿಡಿದುಕೊಂಡಿರ್ತಾಳೆ. ಆ ಮಗು ಅಲ್ಲೇ ಟೇಬಲ್ ಮೇಲೆ ಇಡಲಾಗಿದ್ದ ಜ್ಯೂಸ್ ತುಂಬಿದ ಗ್ಲಾಸ್ನ್ನ ಎಳೆಯೋಕೆ ಮುಂದಾಗುತ್ತೆ. ಇನ್ನೇನು ಗ್ಲಾಸ್ ಬಿದ್ದೇ ಹೋಯ್ತು ಅನ್ನೋ ಅಷ್ಟರಲ್ಲಿ ಆ ಮಹಿಳೆ ಕೈಲಿದ್ದ ಮಗುವನ್ನ ಬಿಟ್ಟು ಗ್ಲಾಸ್ನ್ನ ಹಿಡಿದುಕೊಳ್ತಾಳೆ.
ಟ್ವಿಟರ್ನಲ್ಲಿ ಶೇರ್ ಆಗಿರೋ ಈ ವಿಡಿಯೋ 8 ಮಿಲಿಯನ್ಕ್ಕಿಂತಲೂ ಹೆಚ್ಚು ವೀವ್ಸ್ ಪಡೆದಿದೆ. ಇದರಲ್ಲಿ ಅನೇಕರು ವೃದ್ಧೆಯ ಬೇಜವಾಬ್ದಾರಿಗೆ ಹಿಡಿ ಶಾಪ ಹಾಕಿದ್ದರೆ ಇನ್ನೂ ಕೆಲವರು ಕಮೆಂಟ್ ಮೂಲಕ ಕಾಮಿಡಿ ಕಚಗುಳಿ ನೀಡಿದ್ದಾರೆ.