alex Certify ಸ್ಯಾಲಿ ಚಂಡಮಾರುತ ಸಂತ್ರಸ್ತರಿಗೆ ವೃದ್ಧನಿಂದ ಸಹಾಯಹಸ್ತ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಯಾಲಿ ಚಂಡಮಾರುತ ಸಂತ್ರಸ್ತರಿಗೆ ವೃದ್ಧನಿಂದ ಸಹಾಯಹಸ್ತ..!

ಸ್ಯಾಲಿ ಚಂಡಮಾರುತದಿಂದ ತತ್ತರಿಸಿದ್ದ ಕುಟುಂಬಗಳ ಮೂಲಭೂತ ಅವಶ್ಯಕತೆಗಳಿಗೆ ಪಾವತಿಸಬೇಕಾದ ಬಿಲ್​ಗಳನ್ನ ಪಾವತಿಸುವ ಮೂಲಕ ವೃದ್ಧರೊಬ್ಬರು ಮಾನವೀಯತೆ ಮೆರೆದಿದ್ದಾರೆ.

ಫ್ಲೋರಿಡಾದ 74 ವರ್ಷದ ಮೈಕಲ್​ ಎಂಬವರು 114 ಕುಟುಂಬಗಳಿಗೆ ಅವಶ್ಯವಾಗಿ ಬೇಕಿದ್ದ ಸೌಲಭ್ಯಗಳನ್ನ ಮುಂದುವರಿಸಿಕೊಡುವ ಸಲುವಾಗಿ ಬರೋಬ್ಬರಿ 5,60,055.55 ರೂಪಾಯಿ ಖರ್ಚು ಮಾಡಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಈ ವಿಚಾರ ಹರಿದಾಡುತ್ತಿದ್ದು ನೆಟ್ಟಿಗರು ವೃದ್ಧನ ಮಾನವೀಯತೆಗೆ ಶಹಬ್ಬಾಸ್​ ಎಂದಿದ್ದಾರೆ.

ಸ್ಯಾಲಿ ಚಂಡಮಾರುತ ಬಹಳಷ್ಟು ಜನರನ್ನ ನೋಯಿಸಿದೆ. ನಮಗೆ ಇಲ್ಲಿ ಅಡುಗೆ ಮಾಡಿಕೊಳ್ಳೋಕೆ ಗ್ಯಾಸ್​ ಸೌಕರ್ಯವೂ ಇಲ್ಲದಂತಾಗಿದೆ. ಅನೇಕರು ಮನೆಗಳನ್ನ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಹೀಗಾಗಿ ಸಂಕಷ್ಟದಲ್ಲಿದ್ದ ಅನೇಕರಿಗೆ ನಾನು ನನ್ನ ಕೈಲಾದ ಸಹಾಯ ಮಾಡಿದ್ದೇನೆ ಎಂದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...