ಸ್ಯಾಲಿ ಚಂಡಮಾರುತದಿಂದ ತತ್ತರಿಸಿದ್ದ ಕುಟುಂಬಗಳ ಮೂಲಭೂತ ಅವಶ್ಯಕತೆಗಳಿಗೆ ಪಾವತಿಸಬೇಕಾದ ಬಿಲ್ಗಳನ್ನ ಪಾವತಿಸುವ ಮೂಲಕ ವೃದ್ಧರೊಬ್ಬರು ಮಾನವೀಯತೆ ಮೆರೆದಿದ್ದಾರೆ.
ಫ್ಲೋರಿಡಾದ 74 ವರ್ಷದ ಮೈಕಲ್ ಎಂಬವರು 114 ಕುಟುಂಬಗಳಿಗೆ ಅವಶ್ಯವಾಗಿ ಬೇಕಿದ್ದ ಸೌಲಭ್ಯಗಳನ್ನ ಮುಂದುವರಿಸಿಕೊಡುವ ಸಲುವಾಗಿ ಬರೋಬ್ಬರಿ 5,60,055.55 ರೂಪಾಯಿ ಖರ್ಚು ಮಾಡಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಈ ವಿಚಾರ ಹರಿದಾಡುತ್ತಿದ್ದು ನೆಟ್ಟಿಗರು ವೃದ್ಧನ ಮಾನವೀಯತೆಗೆ ಶಹಬ್ಬಾಸ್ ಎಂದಿದ್ದಾರೆ.
ಸ್ಯಾಲಿ ಚಂಡಮಾರುತ ಬಹಳಷ್ಟು ಜನರನ್ನ ನೋಯಿಸಿದೆ. ನಮಗೆ ಇಲ್ಲಿ ಅಡುಗೆ ಮಾಡಿಕೊಳ್ಳೋಕೆ ಗ್ಯಾಸ್ ಸೌಕರ್ಯವೂ ಇಲ್ಲದಂತಾಗಿದೆ. ಅನೇಕರು ಮನೆಗಳನ್ನ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಹೀಗಾಗಿ ಸಂಕಷ್ಟದಲ್ಲಿದ್ದ ಅನೇಕರಿಗೆ ನಾನು ನನ್ನ ಕೈಲಾದ ಸಹಾಯ ಮಾಡಿದ್ದೇನೆ ಎಂದರು.