alex Certify ಮರೆವಿನ ಕಾಯಿಲೆಯಿದ್ದ ವೃದ್ಧ ಜೋಡಿಯನ್ನು ಹುಡುಕಿಕೊಟ್ಟ ಶ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮರೆವಿನ ಕಾಯಿಲೆಯಿದ್ದ ವೃದ್ಧ ಜೋಡಿಯನ್ನು ಹುಡುಕಿಕೊಟ್ಟ ಶ್ವಾನ

ಮರೆವಿನ ರೋಗ ಇರುವ ವೃದ್ಧ ಜೋಡಿಯೊಂದನ್ನು ಪತ್ತೆ ಮಾಡಲು ನೆರವಾದ ಪೊಲೀಸ್ ಶ್ವಾನವೀಗ ನೆಟ್ಟಿಗರ ಪಾಲಿನ ಹೀರೋ ಆಗಿದ್ದಾನೆ. ಜುಲೈ 16ರಂದು ನಾಪತ್ತೆಯಾದ ಈ ಜೋಡಿ ರಸ್ತೆ ಬದಿಯ ಚರಂಡಿಯೊಂದರಲ್ಲಿ ಇದ್ದದ್ದನ್ನು, ಅವರ ಮಂಚದ ತುಂಡೊಂದರ ಸುಳಿವಿನಿಂದ ಪತ್ತೆ ಮಾಡಿದೆ ಈ ಶ್ವಾನ.

ಎಂಬತ್ತು ದಾಟಿದ ಇಬ್ಬರನ್ನೂ ಸಹ ಪತ್ತೆ ಮಾಡಲು ಹೊರಟ ವೇಲ್ಸ್ ಪೊಲೀಸರು ಸರ್ಚ್ ಪಾರ್ಟಿಯೊಂದನ್ನು ಮಾಡಿಕೊಂಡು ಗ್ರಾಮೀಣ ಪ್ರದೇಶವೊಂದರಲ್ಲಿ, ’ರೇ’ ಹೆಸರಿನ ನಾಯಿಯೊಂದಿಗೆ ಹುಡುಕಾಟ ನಡೆಸಿದೆ.

ಆ ದಂಪತಿ ಮಲಗುತ್ತಿದ್ದ ಹಾಸಿಗೆ ಮೇಲಿನ ವಸ್ತುವೊಂದರ ತುಂಡೊಂದರ ವಾಸನೆ ಗ್ರಹಿಸಿದ ನಾಯಿ ಕಾರ್ಯಪ್ರವೃತ್ತನಾದ ನಾಲ್ಕೇ ಗಂಟೆಗಳಲ್ಲಿ ಚರಂಡಿಯೊಂದರ ಒಳಗೆ ಇದ್ದ ದಂಪತಿಯನ್ನು ಪತ್ತೆ ಮಾಡಲು ಸಫಲವಾಗಿದೆ. ಅದೃಷ್ಟವಶಾತ್‌, ದಂಪತಿಗಳಿಬ್ಬರೂ ಪ್ರಜ್ಞೆ ಕಳೆದುಕೊಂಡಿರಲಿಲ್ಲ. ʼರೇʼನ ಹೀರೋಯಿಕ್ಸ್‌ ಬಗ್ಗೆ ನೆಟ್ಟಿಗರು ಬಹಳ ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...