ಪಾಕಿಸ್ತಾನದಿಂದ ಆಯೋಜನೆಗೊಂಡಿದ್ದ ಝೂಮ್ ಮೀಟಿಂಗ್ನ್ನು ಹ್ಯಾಕ್ ಮಾಡಿದ ಅಪರಿಚಿತರು ಶ್ರೀರಾಮ ಹಾಗೂ ಆಂಜನೇಯ ದೇವರ ಭಕ್ತಿಗೀತೆಗಳನ್ನ ಪ್ಲೇ ಮಾಡಿದ್ದಾರೆ. ಫೇಸ್ಬುಕ್ನಲ್ಲಿ ಪ್ರಸಾರವಾಗ್ತಿದ್ದ ಆನ್ಲೈನ್ ಸಭೆಯಲ್ಲಿ ವಿವಿಧ ದೇಶಗಳ ತಜ್ಞರು ಭಾಗಿಯಾಗಿದ್ರು,
ಕಾಶ್ಮೀರವನ್ನ ಭಾರತ ಆಕ್ರಮಿಸಿಕೊಂಡು 72 ವರ್ಷ ಎಂಬ ವಿಚಾರವಾಗಿ ಪಾಕಿಸ್ತಾನ ಸಭೆ ಕರೆದಿತ್ತು. ಭಾರತ ವಿರೋಧಿ ಸಭೆ ಮುಂದುವರಿಯುತ್ತಿದ್ದಂತೆಯೇ ಶ್ರೀರಾಮ ಹಾಗೂ ಹನುಮಾನ್ರ ಹಾಡುಗಳನ್ನ ನುಡಿಸುವ ಮೂಲಕ ಹ್ಯಾಕ್ ಮಾಡಿದ್ದಾರೆ.
ಹಿಂದೂ ದೇವರ ಹಾಡುಗಳು ಕೇಳಲು ಆರಂಭವಾಗ್ತಿದ್ದಂತೆಯೇ ಸಭೆಯಲ್ಲಿದ್ದ ವ್ಯಕ್ತಿಯೊಬ್ಬ ಈ ಸಭೆಯಲ್ಲಿ ಈ ರೀತಿ ಏನಾದ್ರೂ ನಡೆಯುತ್ತೆ ಅಂತಾ ನಿರೀಕ್ಷಿಸಿದ್ವಿ ಅಂತಾ ಹೇಳೋದನ್ನ ಕೇಳಬಹುದಾಗಿದೆ. ವಿಡಿಯೋ ಹ್ಯಾಕ್ ಮಾಡಿದ ಹ್ಯಾಕರ್ಗಳು, ನಾವು ಭಾರತೀಯರು ನಿಮ್ಮನ್ನ ನಾವು ತುಳಿದು ಹಾಕ್ತೇವೆ ಅಂತಾ ಬೆದರಿಕೆ ಹಾಕಿದ್ದಾರೆ.
https://twitter.com/TusharUpreti14/status/1321502724626677760?ref_src=twsrc%5Etfw%7Ctwcamp%5Etweetembed%7Ctwterm%5E1321502724626677760%7Ctwgr%5Eshare_3&ref_url=https%3A%2F%2Fwww.timesnownews.com%2Fthe-buzz%2Farticle%2Fek-hi-naara-ek-hi-naam-jai-shree-ram-pakistans-online-meeting-on-kashmir-hacked-watch%2F674476