ದ ರೋಕ್ ಎಂದೇ ಪ್ರಸಿದ್ಧಿಯನ್ನ ಪಡೆದಿರೋ ಡ್ವೇಯ್ನ್ ಜಾನ್ಸನ್ ತಮ್ಮ ಮಗಳ ಮುದ್ದಾದ ವಿಡಿಯೋವೊಂದನ್ನ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದು ಮಗಳ ಮುಗ್ದತೆ ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ.
ಜಾನ್ಸನ್ರ 2 ವರ್ಷದ ಮಗಳು ಮನೆಯ ತುಂಬೆಲ್ಲ ನ್ಯೂಡೆಲ್ಸ್ ಚೆಲ್ಲಿದ್ದಳು. ಈ ಕೆಲಸ ಯಾರು ಮಾಡಿದ್ದಾರೆ ಅಂತಾ ಕೇಳಿದ್ರೆ ಅದರ ಅಪವಾದವನ್ನ ಟೀನಾ ನಿರ್ಜೀವ ಗೊಂಬೆಯ ಮೇಲೆ ಹೊರಿಸಿದ್ದಾಳೆ.
ಜಾನ್ಸನ್ ಮಗಳ ಬಳಿ ಇದನ್ನ ಮಾಡಿದ್ದು ಯಾರು ಅಂತಾ ಕೇಳ್ದಾಗ ಆಕೆ ಮೊದಲು ನನಗೊತ್ತಿಲ್ಲ ಎಂದು ಹೇಳ್ತಾಳೆ. ಆ ಬಳಿಕ ಕಾಲ್ಪನಿಕ ಪಾತ್ರವಾದ ಫೇರಿ ಮೇಲೆ ಟಿಯಾನಾ ಗೂಬೆ ಕೂರಿಸಿದ್ದಾಳೆ. ಈ ಮುದ್ದಾದ ವಿಡಿಯೋವನ್ನ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಜಾನ್ಸನ್, ಇಷ್ಟೆಲ್ಲ ಕಿತಾಪತಿ ಮಾಡಿದ ಆ ಫೇರಿ ನನ್ನ ಕೈಗೇಗಾನಾದ್ರೂ ಸಿಕ್ಕರೆ ಅದರ ರೆಕ್ಕೆ ಕತ್ತರಿಸುತ್ತೇನೆ ಎಂದು ತಮಾಷೆಯಾಗಿ ಶೀರ್ಷಿಕೆಯನ್ನ ನೀಡಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
https://www.instagram.com/p/CJmAEr8Ful0/?utm_source=ig_web_copy_link