alex Certify ‘ಲವ್ ಬ್ರೇಕಪ್’ ಆದವರು ಸೇಡು ತೀರಿಸಿಕೊಳ್ಳಲು ಇಲ್ಲಿದೆ ಒಂದು ವಿಚಿತ್ರ ಆಫರ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಲವ್ ಬ್ರೇಕಪ್’ ಆದವರು ಸೇಡು ತೀರಿಸಿಕೊಳ್ಳಲು ಇಲ್ಲಿದೆ ಒಂದು ವಿಚಿತ್ರ ಆಫರ್…!

ವ್ಯಾಲೆಂಟೈನ್ಸ್​ ಡೇ ಸಮೀಪಿಸ್ತಾ ಇದೆ. ಪ್ರೇಮಿಗಳ ಖುಷಿಗಂತೂ ಪಾರವೇ ಇಲ್ಲ ಎಂಬಂತಾಗಿದೆ. ಆದರೆ ಲವ್​ ಬ್ರೇಕಪ್​ ಆದೋರು ಏನು ಮಾಡಬೇಕು..? ಪ್ರೇಮದಿಂದ ಮೋಸ ಹೋದವರಿಗೆ ಈ ದಿನದಂದು ಬಹುಶಃ ತಮ್ಮ ಹಳೆ ಪ್ರೇಮಿಯನ್ನ ನೆನೆಸಿಕೊಂಡು ತುಂಬಾನೇ ಕೋಪ ಬರಬಹುದು. ಹೀಗಾಗಿ ನಿಮ್ಮ ಈ ಸಿಟ್ಟನ್ನ ಸಂಭ್ರಮಿಸೋಕು ಇಲ್ಲೊಂದು ಕಡೆ ಅವಕಾಶ ನೀಡಲಾಗಿದೆ.

ವ್ಯಾಲೆಂಟೈನ್ಸ್​ ಡೇ ದಿನವನ್ನ ಕೇವಲ ಪ್ರೇಮಿಗಳು ಮಾತ್ರ ಏಕೆ ಸಂಭ್ರಮಿಸಬೇಕು..? ಲವ್​ ಬ್ರೇಕಪ್​ ಆದವರೂ ಸಹ ಸಂಭ್ರಮಿಸಲಿ ಎಂಬ ಕಾರಣಕ್ಕೆ ಕೆಂಟುಕಿಯಲ್ಲಿರುವ ಸಮುದಾಯವೊಂದು ಹೊಸ ಪ್ಲಾನ್​ ಒಂದನ್ನ ಮಾಡಿದೆ. ಹೆಚ್ಚೇನಲ್ಲ. ನಿಮ್ಮ ಪ್ರೀತಿಯನ್ನ ಧಿಕ್ಕರಿಸಿ ಹೋದವರ ಹೆಸರಿನ ಮೇಲೆ ಬೆಕ್ಕೊಂದು ಮಲ ವಿಸರ್ಜನೆ ಮಾಡಲಿದೆ..!

ಇದಕ್ಕಾಗಿ ನೀವು 727.88 ರೂಪಾಯಿ ಪಾವತಿ ಮಾಡಿದರೆ ಸಾಕು. ನಿಮ್ಮ ಎಕ್ಸ್​ನ ಹೆಸರನ್ನ ಟ್ರೇಯೊಂದರ ಮೇಲೆ ಬರೆಯಲಾಗುತ್ತೆ. ಹಾಗೂ ಅದರ ಮೇಲೆ ಬೆಕ್ಕುಗಳು ಮಲವಿಸರ್ಜನೆ ಮಾಡಲಿವೆ. ನಿಮ್ಮ ಪ್ರೀತಿಗೆ, ನಂಬಿಕೆಗೆ ಮೋಸ ಮಾಡಿದವರ ಮೇಲೆ ದ್ವೇಷ ತೀರಿಸಿಕೊಂಡ ತೃಪ್ತಿ ನಿಮ್ಮದಾಗಲಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...