ಕೊರೊನಾ ವೈರಸ್ ನಿಯಂತ್ರಣ ಮಾಡೋಕೆ ಲಸಿಕೆಗಳ ಬಳಕೆ ಶುರುವಾಗಿದ್ದರೂ ಸಹ ಫೇಸ್ ಮಾಸ್ಕ್ಗಳ ಮಹತ್ವವನ್ನ ನಾವು ಮರೆಯೋ ಹಾಗಿಲ್ಲ. ಇದೀಗ ಕೊರೊನಾ ವೈರಸ್ ಜೊತೆಯೇ ಬದುಕೋದನ್ನ ರೂಢಿ ಮಾಡಿಕೊಂಡ ಜನತೆ ಮನೆಯಿಂದ ಹೊರ ಬರ್ತಿದ್ದಾರೆ. ಸಾರ್ವಜನಿಕ ವಾಹನಗಳಲ್ಲಿ ಹಾಗೂ ವಿಮಾನಗಳಲ್ಲಿ ಪ್ರಯಾಣ ಮಾಡುತ್ತಿದ್ದಾರೆ.
ಸಾರ್ವಜನಿಕ ಸಾರಿಗೆಯೇ ಆಗಿರಲಿ ವಿಮಾನಯಾನವೇ ಆಗಿರಲಿ ಕೊರೊನಾ ಮಾರ್ಗಸೂಚಿಗಳನ್ನ ಪಾಲನೆ ಮಾಡೋದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಸರ್ಕಾರವೇ ಇಂತಹ ನಿಯಮಗಳನ್ನ ಜಾರಿಗೂ ತಂದಿದ್ದರೂ ಸಹ ಕೆಲ ಪ್ರಜ್ಞೆಯಿಲ್ಲದ ನಾಗರಿಕರು ಮಾಸ್ಕ್ ಧರಿಸದೇ ಉದ್ಧಟತನ ಪ್ರದರ್ಶಿಸುತ್ತಿದ್ದಾರೆ.
ಇಂತಹದ್ದೇ ಒಂದು ವಿಚಿತ್ರ ಘಟನೆಗೆ ರ್ಯಾನೇರ್ ವಿಮಾನ ಸಾಕ್ಷಿಯಾಗಿದೆ.
ಇಬಿಝಾಗೆ ಹೊರಟಿದ್ದ ವಿಮಾನದಲ್ಲಿ ಪ್ರಯಾಣ ಬೆಳೆಸಬೇಕಿದ್ದ ಮಹಿಳೆ ಪಾನಮತ್ತಳಾಗಿದ್ದು ಮಾತ್ರವಲ್ಲದೇ ಫೇಸ್ ಮಾಸ್ಕ್ನ್ನು ಧರಿಸದೇ ಫ್ಲೈಟ್ ಏರಿದ್ದಳು. ಮಾಸ್ಕ್ ಧರಿಸಿ ಎಂದು ವಿಮಾನಯಾನ ಸಿಬ್ಬಂದಿ ಹಾಗೂ ಪೊಲೀಸರು ಹೇಳಿದರೂ ಸಹ ಕೇಳದೇ ಮಹಿಳೆ ಉದ್ಧಟತನ ತೋರಿದ್ದಾಳೆ.
ಈ ಮಹಿಳೆಯನ್ನ 34 ವರ್ಷದ ಹೆಯ್ಲೆ ಬಾಕ್ಸ್ ಎಂದು ಗುರುತಿಸಲಾಗಿದೆ. ಡ್ರಗ್ ಓವರ್ಡೋಸ್ನಿಂದಾಗಿ ಈಕೆಯ ಸ್ಪ್ಯಾನಿಶ್ ಸ್ನೇಹಿತ ಪ್ರಾಣಕಳೆದುಕೊಂಡ ಬಳಿಕ ಹೆಯ್ಲೆ ಸಿಕ್ಕಾಪಟ್ಟೆ ಭಾವುಕರಾಗಿದ್ದರು ಎನ್ನಲಾಗಿದೆ.
ಫೇಸ್ಮಾಸ್ಕ್ ಧರಿಸಲು ನಿರಾಕರಿಸಿದ ಹಿನ್ನೆಲೆ ಮ್ಯಾನೇಜರ್ ವಿಮಾನದಿಂದ ಇಳಿಯಿರಿ ಎಂದು ಹೇಳಿದ್ರೂ ಸಹ ಕೇಳದ ಮಹಿಳೆ ಸೀಟ್ ಬೆಲ್ಟ್ನ್ನು ಧರಿಸಿದ್ದಳು. ಹೀಗಾಗಿ ವಿಮಾನಯಾನ ಸಿಬ್ಬಂದಿ ಪೊಲೀಸರನ್ನ ಕರೆಯಿಸುತ್ತಿದ್ದಂತೆ ಆಕೆ ಇನ್ನಷ್ಟು ಕೋಪಗೊಂಡಿದ್ದಾಳೆ.
ಅಂದಹಾಗೆ ಕತೆ ಇಲ್ಲಿಗೇ ಮುಗಿದಿಲ್ಲ. ಆಕೆ ಪೊಲೀಸ್ ಅಧಿಕಾರಿಗಳ ಮೇಲೆಯೇ ಆಕ್ರಮಣಕ್ಕೆ ಮುಂದಾಗಿದ್ದಾಳೆ. ವಿಚಿತ್ರ ಅಂದರೆ ಪಾನಮತ್ತಳಾಗಿದ್ದ ಈಕೆಗೆ ತಾನು ಏನು ಮಾಡುತ್ತಿದ್ದೇನೆ ಎಂಬುದರ ಅರಿವು ಕೂಡ ಇರಲಿಲ್ಲವಂತೆ.