ಎರಡು ದೈತ್ಯ ಶಾರ್ಕ್ಗಳು ಹಾಗೂ ಸ್ಟಿಂಗ್ರೇಗಳು ಬಳಿಯಲ್ಲೇ ಅಡ್ಡಾಡುತ್ತಿರುವಾಗಲೂ ಸಹ ಹಲವರು ಅಲ್ಲೇ ಈಜಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.
Drone Shark App ಶೇರ್ ಮಾಡಿಕೊಂಡಿರುವ ಈ ವಿಡಿಯೋದಲ್ಲಿ, ಸಾಲೋಮನ್ ಮೀನುಗಳ ದೊಡ್ಡ ಗುಚ್ಛವೊಂದರ ಬಳಿ ಇವರುಗಳು ಈಜಾಡುತ್ತಿದ್ದು ಇಲ್ಲಿ ಕೆಲವು ಡಾಲ್ಫಿನ್ಗಳು ಹಾಗೂ ಸೀಲ್ಗಳು ಇರುವುದನ್ನು ಸಹ ನೋಡಬಹುದಾಗಿದೆ. ಆದರೆ ಅಲ್ಲಿ ಶಾರ್ಕ್ಗಳೂ ಸಹ ಕಂಡುಬಂದಿರುವುದು ತಜ್ಞರ ಗಮನಕ್ಕೆ ಬಂದಿದೆ.
ಸಾಲೋಮನ್ ಮೀನುಗಳ ಗುಚ್ಛದ ಮೇಲೆ ಶಾರ್ಕ್ಗಳ ಕಣ್ಣುಗಳು ಯಾವಾಗಲೂ ಇರುವ ಕಾರಣ ಇಂಥ ಪ್ರದೇಶಗಳಲ್ಲಿ ಈಜಲು ಹೋಗಬಾರದು ಎಂದು ಈ ಡ್ರೋನ್ ಶಾರ್ಕ್ ಕಿರು ತಂತ್ರಾಂಶದ ಸಾಮಾಜಿಕ ಜಾಲತಾಣದ ಪೇಜ್ ವಾರ್ನ್ ಮಾಡಿದೆ.