alex Certify ಕೆಲವೇ ಕ್ಷಣಗಳಲ್ಲಿ ಆಂಬುಲೆನ್ಸ್​ಗೆ ದಾರಿ ಮಾಡಿಕೊಟ್ಟ ಕಾರು ಚಾಲಕರು: ವೈರಲ್​ ಆಯ್ತು ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಲವೇ ಕ್ಷಣಗಳಲ್ಲಿ ಆಂಬುಲೆನ್ಸ್​ಗೆ ದಾರಿ ಮಾಡಿಕೊಟ್ಟ ಕಾರು ಚಾಲಕರು: ವೈರಲ್​ ಆಯ್ತು ವಿಡಿಯೋ

ಆಂಬುಲೆನ್ಸ್​ಗಳಲ್ಲಿ ಒಂದು ಜೀವ ಸಾವು – ಬದುಕಿನ ನಡುವೆ ಹೋರಾಟ ಮಾಡ್ತಾ ಇರೋದ್ರಿಂದ ರಸ್ತೆಗಳಲ್ಲಿ ಆಂಬುಲೆನ್ಸ್​ಗೆ ದಾರಿ ಬಿಟ್ಟು ಕೊಡೋದು ಕಡ್ಡಾಯ. ಆದರೆ ಅನೇಕ ಪ್ರಕರಣಗಳಲ್ಲಿ ಆಂಬುಲೆನ್ಸ್​ಗಳು ಟ್ರಾಫಿಕ್​ನಲ್ಲಿ ಸಿಲುಕಿಕೊಂಡುಬಿಡುತ್ತೆ, ಆದರೆ ಬ್ರಿಟನ್​ನಲ್ಲಿ ಡ್ರೈವರ್​ಗಳೆಲ್ಲಾ ಸೇರಿ ಆಂಬುಲೆನ್ಸ್​ಗೆ ದಾರಿ ಮಾಡಿಕೊಟ್ಟಿದ್ದು ಈ ವಿಡಿಯೋ ಸಖತ್​ ವೈರಲ್​ ಆಗಿದೆ.

ಟ್ರಾಫಿಕ್​ ಜಾಮ್​ನಲ್ಲಿ ಆಂಬುಲೆನ್ಸ್ ಸಿಲುಕಬಾರದು ಎಂಬ ಕಾರಣಕ್ಕೆ ಡ್ರೈವರ್​ಗಳು ತೋರಿದ ಸಮಯ ಪ್ರಜ್ಞೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆಯನ್ನ ಗಳಿಸುತ್ತಿದೆ. ರಸ್ತೆಯ ಒಂದು ಭಾಗವನ್ನ ಬ್ಲಾಕ್​ ಮಾಡಿರೋದನ್ನ ಗಮನಿಸಿದ ಕಾರು ಚಾಲಕರು ಒಬ್ಬೊಬ್ಬರಾಗಿ ಮುಂದೆ ಬಂದು ಟ್ರಾಫಿಕ್​ ಕೋನ್​ಗಳನ್ನ ತೆಗೆಯುವ ಮೂಲಕ ಆಂಬುಲೆನ್ಸ್​ಗೆ ದಾರಿ ಮಾಡಿಕೊಟ್ಟಿದ್ದಾರೆ.

ಈ ವಿಡಿಯೋ ನೋಡಿದ ನೆಟ್ಟಿಗರು ಜಗತ್ತಿನಲ್ಲಿ ಇನ್ನೂ ಒಳ್ಳೆಯ ಜನ ನೆಲೆಸಿದ್ದಾರೆ ಅನ್ನೋದಕ್ಕೆ ಈ ವಿಡಿಯೋನೇ ಸಾಕ್ಷಿ ಅಂತಾ ಹೇಳ್ತಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...