alex Certify ದಿನಕ್ಕೆರಡು ಬಾರಿ ಬಬಲ್ ಟೀ ಸೇವಿಸಿ ಕೋಮಾ ತಲುಪಿದ್ದ ಯುವತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಿನಕ್ಕೆರಡು ಬಾರಿ ಬಬಲ್ ಟೀ ಸೇವಿಸಿ ಕೋಮಾ ತಲುಪಿದ್ದ ಯುವತಿ

ಚೀನಾದ ಯುವತಿಯೊಬ್ಬಳು‌ ಬಬಲ್ ಟೀ ಕುಡಿಯುವುದನ್ನು ಚಟವಾಗಿಸಿಕೊಂಡು, ದಿನಕ್ಕೆರೆಡು ಬಾರಿ ಸೇವಿಸುವ ಮೂಲಕ‌ ಆರೋಗ್ಯದಲ್ಲಿ ಏರುಪೇರಾಗಿ ಐದು ದಿನ‌ ಕೋಮಾದಲ್ಲಿರುವ ಅಚ್ಚರಿಯ ಘಟನೆ ಚೀನಾದಲ್ಲಿ ನಡೆದಿದೆ.

ಶಾಂಘೈನ‌ ವಾಸಿಯಾಗಿರುವ ಯುವತಿ ಒಂದು‌‌ ತಿಂಗಳ ಕಾಲ ಪ್ರತಿನಿತ್ಯ ಎರಡು ಬಾರಿ ಬಬಲ್‌ ಟೀ ಸೇವಿಸುತ್ತಿದ್ದರಂತೆ. ಅದಕ್ಕಾಗಿ ಯುವತಿಗೆ ಬಬಲ್ ಟೀ ಗರ್ಲ್‌ ಎಂದು ಹೆಸರಿಡಲಾಗಿತ್ತು. ಆದರೆ ಈ ಟೀ ನಲ್ಲಿ ಅತಿ ಹೆಚ್ಚು ಸಕ್ಕರೆ ಅಂಶವಿರುವುದರಿಂದ ಮಧುಮೇಹ ಉಂಟಾಗಿ ಕೋಮಾ ತಲುಪುವ ಹಂತಕ್ಕೆ ‌ಹೋಗಿದ್ದಾಳೆ ಎಂದು ತಿಳಿದುಬಂದಿದೆ.

ಕುಟುಂಬ ಸದಸ್ಯರ ಪ್ರಕಾರ ದಿನಕ್ಕೆ ಎರಡು ಬಾರಿ ಬಬಲ್‌ ಟೀ ಸೇವಿಸುತ್ತಿದ್ದ 18 ವರ್ಷದ ಯುವತಿ ಇದಕ್ಕಾಗಿ ‌ಸಾವಿರಾರು ರೂಪಾಯಿ ವ್ಯಯಿಸುತ್ತಿದ್ದಳಂತೆ. ಆಸ್ಪತ್ರೆಗೆ ದಾಖಲಾಗುವ‌ ವಾರದ ಮೊದಲು ಮನೆಯಲ್ಲಿ ಒಮ್ಮೆ‌‌ ಮೂರ್ಛೆ ಹೋಗಿದ್ದ ಯುವತಿ,‌ ಆಸ್ಪತ್ರೆಯಲ್ಲಿ ಕೋಮಾದಿಂದ ಹೊರಬರಲು ಐದು ದಿ‌ನ ಹಿಡಿದಿದೆ. ಈ ಅವಧಿಯಲ್ಲಿ 125 ಕೆಜಿ‌ ಇದ್ದ ಆಕೆ‌ 35 ಕೆಜಿ ತೂಕ‌ ಇಳಿಸಿದ್ದಾಳೆ ಎಂದು ವೈದ್ಯರು‌‌ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...