
ಸಾಮಾಜಿಕ ಜಾಲತಾಣ ಎನ್ನುವುದು ಒಂದು ರೀತಿಯ ಮಾಯಾಬಜಾರ್. ಪ್ರತಿನಿತ್ಯವೂ ಇಲ್ಲಿ ಚಿತ್ರವಿಚಿತ್ರ ಕಾರಣಗಳಿಗೆಲ್ಲಾ ಜನರು ಸುದ್ದಿ ಮಾಡುತ್ತಿರುತ್ತಾರೆ.
ಮಂಗಳವಾರದಿಂದ #MyFamilyIsWeird ಎಂಬ ಹ್ಯಾಶ್ಟ್ಯಾಗ್ ಟ್ರೆಂಡ್ ಒಂದು ಸದ್ದು ಮಾಡುತ್ತಿದ್ದು, ನೆಟ್ಟಿಗರು ತಂತಮ್ಮ ಕುಟುಂಬಗಳಲ್ಲಿ ನಡೆಯುವ ವಿಚಿತ್ರ ಘಟನೆಗಳನ್ನು ಹ್ಯಾಶ್ಟ್ಯಾಗ್ ಅಡಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಮಹಿಳಾ ದೌರ್ಜನ್ಯದ ಕುರಿತು ಸಮೀಕ್ಷೆಯಲ್ಲಿ ‘ಶಾಕಿಂಗ್’ ಸಂಗತಿ ಬಹಿರಂಗ
ದಿ ಟುನೈಟ್ ಶೋ ಹೋಸ್ಟ್ ಜಿಮ್ಮಿ ಫಾಲನ್ ಅವರು ತಮ್ಮ ಸ್ನೇಹಿತರೊಬ್ಬರ ಕುಟುಂಬದ ಮಂದಿ ಮಾಡುವ ವಿಚಿತ್ರ ಕೆಲಸವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಪ್ರತಿಯೊಬ್ಬ ಎತ್ತರ ಹಾಗೂ ತೂಕದ ವಿವರಗಳನ್ನು ಬರೆದಿರುವ ಕ್ರಿಸ್ಮಸ್ ಕಾರ್ಡ್ಗಳನ್ನು ತಮ್ಮ ಸ್ನೇಹಿತರೊಬ್ಬರ ಕುಟುಂಬವೊಂದು ಕಳುಹಿಸುತ್ತಿತ್ತು ಎಂದು ಫಾಲನ್ ಹೇಳಿದ್ದಾರೆ.
ಈ ಟ್ಯಾಗ್ ಈಗ ಬಲೇ ವೈರಲ್ ಆಗಿದ್ದು, ನೆಟ್ಟಿಗರೆಲ್ಲರೂ ತಂತಮ್ಮ ಅನುಭವಗಳನ್ನು ಶೇರ್ ಮಾಡಿಕೊಳ್ಳಲು ಆರಂಭಿಸಿದ್ದಾರೆ.