alex Certify ಕಾರು ಕದಿಯಲು ಬಂದ ಯುವಕನಿಗೆ ವೃದ್ಧನಿಂದ ಸಖತ್ ಗೂಸಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರು ಕದಿಯಲು ಬಂದ ಯುವಕನಿಗೆ ವೃದ್ಧನಿಂದ ಸಖತ್ ಗೂಸಾ

ಕಾರನ್ನ ಕದಿಯುವವರು ಸಾಮಾನ್ಯವಾಗಿ ವೃದ್ಧರನ್ನೇ ಟಾರ್ಗೆಟ್​ ಮಾಡ್ತಾರೆ. ವೃದ್ಧರಿಗೆ ಪ್ರತಿರೋಧ ಒಡ್ಡೋಕೆ ಆಗಲ್ಲ ಎಂಬ ಕಾರಣಕ್ಕೆ ಕಳ್ಳರು ಈ ರೀತಿ ಮಾಡ್ತಾರೆ. ಆದರೆ ಎಲ್ಲಾ ವೃದ್ಧ ಕಾರು ಮಾಲೀಕರು ಒಂದೇ ರೀತಿ ಇರ್ತಾರೆ ಎಂದು ಹೇಳೋಕೆ ಬರಲ್ಲ. ಕೆಲವೊಮ್ಮ ಕಾರುಗಳ್ಳರ ಈ ಪ್ಲಾನ್​ ಅವರಿಗೆ ಉಲ್ಟಾ ಹೊಡೆಯಲೂಬಹುದು.

ಅಟ್ಲಾಂಟಾ ಪೊಲೀಸರು ಸಣ್ಣ ವಿಡಿಯೋವೊಂದನ್ನ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದು ಇದರಲ್ಲಿ ಯುವಕನೊಬ್ಬನ ಜೊತೆ 82 ವರ್ಷದ ವೃದ್ಧ ಫೈಟ್​ ಮಾಡುತ್ತಿರುವ ದೃಶ್ಯ ಇದೆ.

ವಿಡಿಯೋದಲ್ಲಿ 82 ವರ್ಷದ ವೃದ್ಧ ಬಂದೂಕುದಾರಿ ಯುವಕನ ಜೊತೆ ಫೈಟ್​ ಮಾಡುತ್ತಿರುವ ದೃಶ್ಯವಿದೆ. ಈ ಘಟನೆ ಮಾರ್ಚ್​ 11ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಗ್ಯಾಸ್​ ಸ್ಟೇಷನ್​ನಲ್ಲಿ ನಿಂತಿದ್ದ ಯುವಕ ವೃದ್ಧನ ಜೊತೆ ಕೆಲಕಾಲ ಸಂಭಾಷಣೆ ನಡೆಸಿದ್ದಾನೆ, ಇದಾದ ಬಳಿಕ ಗನ್​ ಹೊರತೆಗೆದ ಯುವಕ ಕಾರನ್ನ ಕೊಡುವಂತೆ ವೃದ್ಧನಿಗೆ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಲಟ್ಟಣಿಗೆ ಹಿಡಿದು ಬೆನ್ನಟ್ಟಿದ ಪತ್ನಿಗೆ ಪತಿಯಿಂದ ಸಿಕ್ತು ಸೂಪರ್‌ ‌ʼಗಿಫ್ಟ್ʼ

ಆದರೆ ಕಾರುಗಳ್ಳನ ಬೆದರಿಕೆಗೆ ಬಗ್ಗದ ವೃದ್ಧ, ಯುವಕನ ಜೊತೆ ಸಮಬಲದಿಂದ ಕುಸ್ತಿ ಮಾಡಿದ್ದಾನೆ. ಕೊನೆಗೂ ಕಾರಿನ ಬಳಿ ಹೋದ ಯುವಕ ಕಾರನ್ನ ಸ್ಟಾರ್ಟ್​ ಮಾಡಲು ಯತ್ನಿಸಿದ್ದಾನೆ. ಆದರೆ ಕಾರು ಬೇಗನೆ ಸ್ಟಾರ್ಟ್​ ಆಗದ ಕಾರಣ ಸ್ಥಳದಿಂದ ಕಾಲ್ಕಿತ್ತಿದ್ದಾನೆ.

ವೃದ್ಧನಿಗೆ ತೀರಾ ಗಂಭೀರ ಗಾಯಗಳೇನಾಗದಿದ್ದರೂ ಸಹ ತೋಳಿಗೆ ಬಲವಾಗಿ ಪೆಟ್ಟು ಬಿದ್ದಿದೆ ಎನ್ನಲಾಗಿದೆ. ಘಟನೆ ನಡೆದ ಸರಿ ಸುಮಾರು 1 ತಿಂಗಳ ಬಳಿಕ ವಿಡಿಯೋವನ್ನ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿರುವ ಪೊಲೀಸರು ಆರೋಪಿ ಪತ್ತೆಗೆ ಸಾರ್ವಜನಿಕರ ನೆರವನ್ನ ಕೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...