ಶ್ರೀಲಂಕಾದ ಕೊಲಂಬೋದಿಂದ 200 ಕಿ.ಮೀ. ದೂರದಲ್ಲಿರುವ ಮಿನ್ನೇರಿಯಾ ವನ್ಯಜೀವಿಧಾಮದಲ್ಲಿ ಆನೆಗಳ ಹಿಂಡಿನೊಂದಿಗೆ ಕಾಣಿಸಿಕೊಂಡ ಎರಡು ಮುದ್ದಾದ ಮರಿಗಳು ಒಂದೇ ತಾಯಿಯೊಂದಿಗೆ ಕಂಡಿದ್ದು, ಇವು ಅವಳಿಗಳು ಎಂದು ಅಲ್ಲಿನ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಮೂರರಿಂದ ನಾಲ್ಕು ವಾರಗಳ ಈ ಮರಿಗಳು, ಶ್ರೀಲಂಕಾದಲ್ಲಿ ಮೊದಲ ಬಾರಿಗೆ ಕಾಣಸಿಕ್ಕ ಅವಳಿ ಎಂಬ ಶ್ರೇಯಕ್ಕೆ ಪಾತ್ರರಾಗಬಹುದು. ಆನೆಗಳ ಡಿಎನ್‌ಎ ಸ್ಯಾಂಪಲ್ ಪರೀಕ್ಷೆ ಮಾಡಿದ ಬಳಿಕ ಈ ಬಗ್ಗೆ ಅಲ್ಲಿನ ಅರಣ್ಯ ಇಲಾಖೆ ಖಾತ್ರಿ ನೀಡಲಿದೆ.
ಪುಟಾಣಿ ಮರಿಗಳು ಅದೆಷ್ಟು ಕ್ಯೂಟ್ ಇವೆ ಎಂದರೆ, ಇವುಗಳ ಫೋಟೋ ನೋಡಿದ ನೆಟ್ಟಗರು ಬಹಳ ಖುಷಿ ಪಟ್ಟುಕೊಂಡು ಕಾಮೆಂಟ್ ಮಾಡುತ್ತಿದ್ದಾರೆ.
https://twitter.com/mannyshot/status/1280932372477874176?ref_src=twsrc%5Etfw%7Ctwcamp%5Etweetembed%7Ctwterm%5E1280932372477874176%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fdouble-the-joy-sri-lanka-rangers-spot-possible-rare-baby-elephant-twins-photo-goes-viral%2F618870