alex Certify ಮಕ್ಕಳಿಗಾಗಿ ಮನೆಯಲ್ಲೇ ಡಿಸ್ನಿಲ್ಯಾಂಡ್ ಸಿದ್ಧ ಮಾಡಿದ ತಂದೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳಿಗಾಗಿ ಮನೆಯಲ್ಲೇ ಡಿಸ್ನಿಲ್ಯಾಂಡ್ ಸಿದ್ಧ ಮಾಡಿದ ತಂದೆ

Watch: Doting Dad Creates Disneyland Experience For His Two Toddlers. Video goes Viral

ಕೋವಿಡ್ ಲಾಕ್ ಡೌನ್ ಕಾರಣ ಮಕ್ಕಳೆಲ್ಲ ಮನೆಯಲ್ಲೇ ಇದ್ದಾರೆ. ಇದರಿಂದ ಅವರ ಬೇಸರ ಕಳೆಯುವುದೇ ದೊಡ್ಡ ಸವಾಲು. ಅಪ್ಪನೊಬ್ಬ ತನ್ನ ಮನೆಯಲ್ಲೇ ಡಿಸ್ನಿಲ್ಯಾಂಡ್ ಸೃಷ್ಟಿಸಿ ಮಕ್ಕಳನ್ನು ಆಟವಾಡಿಸುವ ವಿಡಿಯೋ ವೈರಲ್ ಆಗಿದೆ.‌

ಉತಾಹ್ ನಿವಾಸಿ ಲಿಂಡ್ಸಿ ಬ್ರೂಕ್ ಥಾಮಸ್ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಅಪ್ ಲೋಡ್ ಮಾಡಿದ್ದು, “ನನ್ನ ಪತಿ ಡಿಸ್ನಿ ಲ್ಯಾಂಡ್ ಸೃಷ್ಟಿ ಮಾಡಿದ್ದಾರೆ‌ʼʼ ಎಂದು ಕ್ಯಾಪ್ಶನ್ ನೀಡಿದ್ದಾರೆ.

ಆಕೆಯ ಪತಿ ಮನೆಯಲ್ಲಿ ಇಬ್ಬರು ಮಕ್ಕಳನ್ನು ಬಾಸ್ಕೆಟ್ ನಲ್ಲಿ ಕೂರಿಸಿ ಡಿಸ್ನಿಲ್ಯಾಂಡ್ ವಿಡಿಯೋ ಎದುರು ಕೂರಿಸಿ ಅದರ ಮೇಲೆ ಓಡಾಡಿದಂತೆ ಇಫೆಕ್ಟ್ ಮಾಡಿ ತೋರಿಸಿದ್ದಾರೆ.‌ ವಿಡಿಯೋ ನೋಡಿ ಹಲವರು ಖುಷಿಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...