ಪ್ರಾಣಿಗಳಿಗೂ ಭಾವನೆಗಳಿವೆ ಎಂಬ ಮಾತು ಪದೇ ಪದೇ ಸಾಬೀತಾಗ್ತಾನೇ ಇರುತ್ತೆ. ಈ ಮಾತಿಗೆ ಸಾಕ್ಷಿ ಎಂಬಂತೆ ಕತ್ತೆಯೊಂದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋ ಟ್ವಿಟರ್ನಲ್ಲಿ ಬರೋಬ್ಬರಿ 6 ಮಿಲಿಯನ್ ವೀವ್ಸ್ ಸಂಪಾದಿಸಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಫಿದಾ ಆಗಿದ್ದಾರೆ.
ವಿಡಿಯೋದಲ್ಲಿ ಪುಟ್ಟ ಬಾಲಕಿ ಬಳಿ ಕತ್ತೆ ನಡೆದುಕೊಂಡು ಬಂದಿದೆ. ಬಳಿಕ ಆ ಕತ್ತೆಯನ್ನ ಬಾಲಕಿ ತನ್ನ ತೋಳುಗಳಲ್ಲಿ ಆಲಂಗಿಸಿಕೊಂಡಿದ್ದಾಳೆ. ಬಾಲಕಿಯ ಕಣ್ಣಲ್ಲಿ ನೀರು ಜಿನುಗಿದ್ರೆ ಕತ್ತೆ ಸಹ ತನ್ನ ಭಾವನೆಯನ್ನ ಹೊರಹಾಕ್ತಿರೋದನ್ನ ನೋಡಬಹುದಾಗಿದೆ.
ತನ್ನನ್ನ ಸಾಕಿದ ಬಾಲಕಿಯೊಂದಿಗೆ ಈ ಕತ್ತೆಯು ಮತ್ತೆ ಒಂದಾಗಿದೆ ಎಂದು ಈ ಪೋಸ್ಟ್ಗೆ ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು 2 ಲಕ್ಷಕ್ಕೂ ಅಧಿಕ ಲೈಕ್ ಹಾಗೂ 27 ಸಾವಿರಕ್ಕೂ ಅಧಿಕ ಕಮೆಂಟ್ ಸಂಪಾದಿಸಿದೆ.
https://twitter.com/i/status/1396493247078440960