ಪುಟ್ಟ ಮಕ್ಕಳಿಗೆ ಅಂಬೆಗಾಲಿಡೋದನ್ನ, ನಡೆಯೋದನ್ನ, ಮಾತನಾಡೋದನ್ನ ಹೀಗೆ ಎಲ್ಲಾ ಚಟುವಟಿಕೆಗಳನ್ನ ತಾಯಿಯಾದವಳು ಕಲಿಸುತ್ತಾಳೆ. ಆದರೆ ನಾಯಿಯೊಂದು ಇನ್ನೊಂದು ಮರಿ ನಾಯಿಗೆ ಮೆಟ್ಟಿಲು ಇಳಿಯೋದು ಹೇಗೆ ಅಂತಾ ಮಾರ್ಗದರ್ಶನ ನೀಡ್ತಿರೋದನ್ನ ಎಲ್ಲಾದರೂ ಕಂಡಿದ್ದೀರಾ..? ನೀವು ನೋಡಿಲ್ಲ ಅಂದರೆ ಈ ವಿಡಿಯೋನ್ನೊಮ್ಮೆ ವೀಕ್ಷಿಸಲೇಬೇಕು.
ಇಂಟರ್ನೆಟ್ನಲ್ಲಿಲಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿರೋ ಕೇವಲ 31 ಸೆಕೆಂಡ್ಗಳ ಈ ವಿಡಿಯೋದಲ್ಲಿ ದೊಡ್ಡ ನಾಯಿಯೊಂದು ಕಣ್ಣು ಕಾಣದ ಪುಟಾಣಿ ನಾಯಿಗೆ ಮೆಟ್ಟಿಲು ಇಳಿಯೋದು ಹೇಗೆ ಅಂತಾ ಪಾಠ ಮಾಡಿದೆ.
ದೊಡ್ಡ ನಾಯಿಯ ಸಹಾಯ ಪಡೆದ ಕುರುಡು ನಾಯಿ ಒಂದೊಂದೇ ಹೆಜ್ಜೆಯನ್ನ ಎಚ್ಚರಿಕೆಯಿಂದ ಇಡುತ್ತಾ ಕೆಳಕ್ಕೆ ಇಳಿದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಆದ ಕೆಲವೇ ಗಂಟೆಗಳಲ್ಲಿ ಲಕ್ಷಕ್ಕೂ ಹೆಚ್ಚು ವೀವ್ಸ್ ಹಾಗೂ ಲೈಕ್ಗಳನ್ನ ಸಂಪಾದಿಸಿದೆ.
https://twitter.com/i/status/1335949370391293954