alex Certify ಮೈದಾನ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸಿದ ಶ್ವಾನ ಹಾಗೂ ಕುರಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೈದಾನ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸಿದ ಶ್ವಾನ ಹಾಗೂ ಕುರಿ…!

ಮೇಯರ್​ ಆಗಿ ಆಯ್ಕೆ ಆಗಿದ್ದ ಕುರಿ ಹಾಗೂ ಶ್ವಾನ ವೆರ್ಮೊಂಟ್​ ಸಮುದಾಯದ ಆಟದ ಮೈದಾನ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸಲು ಸಹಾಯ ಮಾಡಿದೆ. ಆಟದ ಮೈದಾನವನ್ನ ಪುನರ್​ನಿರ್ಮಾಣ ಮಾಡುವ ಮೂಲಕ ಸ್ಥಳೀಯ ಮಕ್ಕಳಿಗೆ ನೆರವಾಗಲು ಈ ಕೆಲಸ ಮಾಡಲಾಗ್ತಿದೆ.

2018ರಲ್ಲಿ ಫೇರ್​ ಹೆವನ್​ ನಿವಾಸಿಗಳು ಲಿಂಕನ್​ ಮೇಕೆಯನ್ನ ಮೇಯರ್ ಆಗಿ  ಆಯ್ಕೆ ಮಾಡಿದ್ದರು. ಲಿಂಕನ್​​ ಸುಮಾರು 10 ಸಾವಿರ ಡಾಲರ್​ ದೇಣಿಗೆ ಸಂಗ್ರಹಕ್ಕೆ ಸಹಾಯ ಮಾಡಿದೆ. ಹಾಗೂ ಪ್ರಸ್ತುತ ಮೇಯರ್​ ಕ್ಯಾವಲಿಯನ್​ ಕಿಂಗ್​ ಚಾರ್ಲ್ಸ್ ಮರ್ಫಿ​ ಶ್ವಾನ 20 ಸಾವಿರ ಡಾಲರ್​ ದೇಣಿಗೆ ಸಂಗ್ರಹಿಸಿದೆ ಎಂದು ಟೌನ್​ ಮ್ಯಾನೇಜರ್​ ಮಾಹಿತಿ ನೀಡಿದ್ದಾರೆ.

ಮರ್ಫಿಯ ಮಾಲೀಕೆ ಲಿಂಡಾ ಬಾರ್ಡರ್​, ಟೀ ಶರ್ಟ್​ಗಳನ್ನ ಮಾರಾಟ ಮಾಡೋ ಮೂಲಕ ಹಣ ಸಂಗ್ರಹಿಸೋದು ಸುಲಭ ಎಂದು ಭಾವಿಸಿದ್ದರು. ಆದರೆ ಕೊರೊನಾ ವೈರಸ್​ನಿಂದಾಗಿ ಇದು ಸಾಧ್ಯವಾಗಲಿಲ್ಲ.

ಹೀಗಾಗಿ ಟೀ ಶರ್ಟ್​ ಜಾಗದಲ್ಲಿ ಮಾಸ್ಕ್​​ಗಳನ್ನ ಮಾರಾಟ ಮಾಡೋಕೆ ನಿರ್ಧರಿಸಿದ್ರು. ಹೀಗಾಗಿ 1000 ಮಾಸ್ಕ್​ಗಳನ್ನ ತಯಾರಿಸಿದ್ರು. ಇದೀಗ ಪ್ರೇಮಿಗಳ ದಿನಾಚರಣೆಗೆ ಇನ್ನೊಂದು ಸುತ್ತು ಮಾಸ್ಕ್​ ತಯಾರಿಸುವ ಯೋಚನೆಯಲ್ಲಿದ್ದಾರೆ. ಅಲ್ಲದೇ ಬ್ಯಾಸ್ಕೆಟ್​ ರಾಫಲ್​ಗಳನ್ನೂ ಮಾರಾಟ ಮಾಡಿದ್ದಾರೆ.

ಇನ್ನು ಈ ಪಟ್ಟಣಕ್ಕೆ ಕೆಲ ದಿನಗಳ ಹಿಂದೆ ಭೂಮಿ ಹಾಗೂ ಜನಸಂರಕ್ಷಣಾ ನಿಧಿಯಿಂದ 50 ಸಾವಿರ ಡಾಲರ್​ ಅನುದಾನ ನೀಡಲಾಗಿದೆ. ಆದರೆ ಇಷ್ಟೆಲ್ಲ ಮಾಡಿದ್ರೂ ಸಹ ಮೇಯರ್​ ಶ್ವಾನಕ್ಕೆ ಮೈದಾನಕ್ಕೆ ಬರಲು ಆಗೋದಿಲ್ಲ. ಯಾಕಂದ್ರೆ ನಾಯಿಗೆ ಅನುಮತಿ ಇಲ್ಲ ಎಂಬ ಬೋರ್ಡ್​ನ್ನು ಮೈದಾನಕ್ಕೆ ಹಾಕಲಾಗಿದೆ ಎಂದು ಬಾರ್ಡರ್​ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...