ಮೇಯರ್ ಆಗಿ ಆಯ್ಕೆ ಆಗಿದ್ದ ಕುರಿ ಹಾಗೂ ಶ್ವಾನ ವೆರ್ಮೊಂಟ್ ಸಮುದಾಯದ ಆಟದ ಮೈದಾನ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸಲು ಸಹಾಯ ಮಾಡಿದೆ. ಆಟದ ಮೈದಾನವನ್ನ ಪುನರ್ನಿರ್ಮಾಣ ಮಾಡುವ ಮೂಲಕ ಸ್ಥಳೀಯ ಮಕ್ಕಳಿಗೆ ನೆರವಾಗಲು ಈ ಕೆಲಸ ಮಾಡಲಾಗ್ತಿದೆ.
2018ರಲ್ಲಿ ಫೇರ್ ಹೆವನ್ ನಿವಾಸಿಗಳು ಲಿಂಕನ್ ಮೇಕೆಯನ್ನ ಮೇಯರ್ ಆಗಿ ಆಯ್ಕೆ ಮಾಡಿದ್ದರು. ಲಿಂಕನ್ ಸುಮಾರು 10 ಸಾವಿರ ಡಾಲರ್ ದೇಣಿಗೆ ಸಂಗ್ರಹಕ್ಕೆ ಸಹಾಯ ಮಾಡಿದೆ. ಹಾಗೂ ಪ್ರಸ್ತುತ ಮೇಯರ್ ಕ್ಯಾವಲಿಯನ್ ಕಿಂಗ್ ಚಾರ್ಲ್ಸ್ ಮರ್ಫಿ ಶ್ವಾನ 20 ಸಾವಿರ ಡಾಲರ್ ದೇಣಿಗೆ ಸಂಗ್ರಹಿಸಿದೆ ಎಂದು ಟೌನ್ ಮ್ಯಾನೇಜರ್ ಮಾಹಿತಿ ನೀಡಿದ್ದಾರೆ.
ಮರ್ಫಿಯ ಮಾಲೀಕೆ ಲಿಂಡಾ ಬಾರ್ಡರ್, ಟೀ ಶರ್ಟ್ಗಳನ್ನ ಮಾರಾಟ ಮಾಡೋ ಮೂಲಕ ಹಣ ಸಂಗ್ರಹಿಸೋದು ಸುಲಭ ಎಂದು ಭಾವಿಸಿದ್ದರು. ಆದರೆ ಕೊರೊನಾ ವೈರಸ್ನಿಂದಾಗಿ ಇದು ಸಾಧ್ಯವಾಗಲಿಲ್ಲ.
ಹೀಗಾಗಿ ಟೀ ಶರ್ಟ್ ಜಾಗದಲ್ಲಿ ಮಾಸ್ಕ್ಗಳನ್ನ ಮಾರಾಟ ಮಾಡೋಕೆ ನಿರ್ಧರಿಸಿದ್ರು. ಹೀಗಾಗಿ 1000 ಮಾಸ್ಕ್ಗಳನ್ನ ತಯಾರಿಸಿದ್ರು. ಇದೀಗ ಪ್ರೇಮಿಗಳ ದಿನಾಚರಣೆಗೆ ಇನ್ನೊಂದು ಸುತ್ತು ಮಾಸ್ಕ್ ತಯಾರಿಸುವ ಯೋಚನೆಯಲ್ಲಿದ್ದಾರೆ. ಅಲ್ಲದೇ ಬ್ಯಾಸ್ಕೆಟ್ ರಾಫಲ್ಗಳನ್ನೂ ಮಾರಾಟ ಮಾಡಿದ್ದಾರೆ.
ಇನ್ನು ಈ ಪಟ್ಟಣಕ್ಕೆ ಕೆಲ ದಿನಗಳ ಹಿಂದೆ ಭೂಮಿ ಹಾಗೂ ಜನಸಂರಕ್ಷಣಾ ನಿಧಿಯಿಂದ 50 ಸಾವಿರ ಡಾಲರ್ ಅನುದಾನ ನೀಡಲಾಗಿದೆ. ಆದರೆ ಇಷ್ಟೆಲ್ಲ ಮಾಡಿದ್ರೂ ಸಹ ಮೇಯರ್ ಶ್ವಾನಕ್ಕೆ ಮೈದಾನಕ್ಕೆ ಬರಲು ಆಗೋದಿಲ್ಲ. ಯಾಕಂದ್ರೆ ನಾಯಿಗೆ ಅನುಮತಿ ಇಲ್ಲ ಎಂಬ ಬೋರ್ಡ್ನ್ನು ಮೈದಾನಕ್ಕೆ ಹಾಕಲಾಗಿದೆ ಎಂದು ಬಾರ್ಡರ್ ಹೇಳಿದ್ದಾರೆ.