alex Certify ವಿಡಿಯೋ ಕಾಲ್ ಮೂಲಕವೇ ಪತ್ತೆಯಾಗುತ್ತೆ ನಾಡಿ ಮಿಡಿತ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಡಿಯೋ ಕಾಲ್ ಮೂಲಕವೇ ಪತ್ತೆಯಾಗುತ್ತೆ ನಾಡಿ ಮಿಡಿತ….!

ರೋಗಿಗಳ ಸ್ಮಾರ್ಟ್​ ಇಲ್ಲವೇ ಕಂಪ್ಯೂಟರ್​ನ ಕ್ಯಾಮರಾವನ್ನ ಬಳಕೆ ಮಾಡಿ ನಾಡಿ ಬಡಿತ ಹಾಗೂ ಆಮ್ಲಜನಕ ಮಟ್ಟವನ್ನ ಕಂಡುಹಿಡಿಯುವ ಹೊಸ ವಿಧಾನವನ್ನ ಸಂಶೋಧಕರು ಪತ್ತೆ ಮಾಡಿದ್ದಾರೆ.

ಕೋವಿಡ್​ ಸಂದರ್ಭದಲ್ಲಿ ಸೋಂಕಿಗೆ ಒಳಗಾದ ರೋಗಿಯ ಆರೋಗ್ಯ ತಪಾಸಣೆ ಮಾಡಲು ಇದೊಂದು ಸುರಕ್ಷಿತ ವಿಧಾನವಾಗಿದೆ. ವಾಷಿಂಗ್ಟನ್​ ಯೂನಿವರ್ಸಿಟಿ ನೇತೃತ್ವದ ತಂಡ ರೋಗಿಯ ಮುಖದ ಮೇಲೆ ಬೆಳಕು ಯಾವ ರೀತಿ ಪ್ರತಿಫಲನವಾಗುತ್ತೆ ಅನ್ನೋದನ್ನ ಆಧರಿಸಿ ನಾಡಿ ಮಿಡಿತ ಹಾಗೂ ಆಮ್ಲಜನಕ ಮಟ್ಟವನ್ನ ಅಳೆಯುವ ಹೊಸ ವಿಧಾನವನ್ನ ಕಂಡು ಹಿಡಿದಿದೆ.

ಕಳೆದ ವರ್ಷ ಡಿಸೆಂಬರ್​ನಲ್ಲಿ ನ್ಯೂಟ್ರಲ್​ ಇನ್​​ಫಾರ್ಮೇಷನ್​ ಪ್ರಾಸೆಸಿಂಗ್​ ಸಿಸ್ಟಮ್​ ಸಮ್ಮೇಳನದಲ್ಲಿ ಈ ವಿಧಾನವನ್ನ ಪ್ರಸ್ತುಪಡಿಸಲಾಗಿತ್ತು. ಈಗ ಈ ತಂಡ ಶಾರೀರಿಕ ಸಂಕೇತಗಳನ್ನ ಗುರುತು ಮಾಡಲು ಇನ್ನೂ ಸುಧಾರಿತ ವ್ಯವಸ್ಥೆಯನ್ನ ಕಂಡುಹಿಡಿದಿದೆ.

ವಿವಿಧ ಕ್ಯಾಮರಾ, ಬೆಳಕಿನ ವ್ಯವಸ್ಥೆ ಅಥವಾ ಚರ್ಮದ ಬಣ್ಣಗಳನ್ನ ಆಧರಿಸಿ ಶಾರೀರಿಕ ಸಂಕೇತವನ್ನ ಪಡೆಯಲಾಗುತ್ತದೆ. ಇದೀಗ ಈ ಸಂಶೋಧನೆಯನ್ನ ಏಪ್ರಿಲ್​ 8ರಂದು ಎಸಿಎಂ ಸಮ್ಮೇಳನದಲ್ಲಿ ಮಂಡಿಸಲು ಸಂಶೋಧಕರು ಸಿದ್ಧತೆ ನಡೆಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...