ರೋಗಿಗಳ ಸ್ಮಾರ್ಟ್ ಇಲ್ಲವೇ ಕಂಪ್ಯೂಟರ್ನ ಕ್ಯಾಮರಾವನ್ನ ಬಳಕೆ ಮಾಡಿ ನಾಡಿ ಬಡಿತ ಹಾಗೂ ಆಮ್ಲಜನಕ ಮಟ್ಟವನ್ನ ಕಂಡುಹಿಡಿಯುವ ಹೊಸ ವಿಧಾನವನ್ನ ಸಂಶೋಧಕರು ಪತ್ತೆ ಮಾಡಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಸೋಂಕಿಗೆ ಒಳಗಾದ ರೋಗಿಯ ಆರೋಗ್ಯ ತಪಾಸಣೆ ಮಾಡಲು ಇದೊಂದು ಸುರಕ್ಷಿತ ವಿಧಾನವಾಗಿದೆ. ವಾಷಿಂಗ್ಟನ್ ಯೂನಿವರ್ಸಿಟಿ ನೇತೃತ್ವದ ತಂಡ ರೋಗಿಯ ಮುಖದ ಮೇಲೆ ಬೆಳಕು ಯಾವ ರೀತಿ ಪ್ರತಿಫಲನವಾಗುತ್ತೆ ಅನ್ನೋದನ್ನ ಆಧರಿಸಿ ನಾಡಿ ಮಿಡಿತ ಹಾಗೂ ಆಮ್ಲಜನಕ ಮಟ್ಟವನ್ನ ಅಳೆಯುವ ಹೊಸ ವಿಧಾನವನ್ನ ಕಂಡು ಹಿಡಿದಿದೆ.
ಕಳೆದ ವರ್ಷ ಡಿಸೆಂಬರ್ನಲ್ಲಿ ನ್ಯೂಟ್ರಲ್ ಇನ್ಫಾರ್ಮೇಷನ್ ಪ್ರಾಸೆಸಿಂಗ್ ಸಿಸ್ಟಮ್ ಸಮ್ಮೇಳನದಲ್ಲಿ ಈ ವಿಧಾನವನ್ನ ಪ್ರಸ್ತುಪಡಿಸಲಾಗಿತ್ತು. ಈಗ ಈ ತಂಡ ಶಾರೀರಿಕ ಸಂಕೇತಗಳನ್ನ ಗುರುತು ಮಾಡಲು ಇನ್ನೂ ಸುಧಾರಿತ ವ್ಯವಸ್ಥೆಯನ್ನ ಕಂಡುಹಿಡಿದಿದೆ.
ವಿವಿಧ ಕ್ಯಾಮರಾ, ಬೆಳಕಿನ ವ್ಯವಸ್ಥೆ ಅಥವಾ ಚರ್ಮದ ಬಣ್ಣಗಳನ್ನ ಆಧರಿಸಿ ಶಾರೀರಿಕ ಸಂಕೇತವನ್ನ ಪಡೆಯಲಾಗುತ್ತದೆ. ಇದೀಗ ಈ ಸಂಶೋಧನೆಯನ್ನ ಏಪ್ರಿಲ್ 8ರಂದು ಎಸಿಎಂ ಸಮ್ಮೇಳನದಲ್ಲಿ ಮಂಡಿಸಲು ಸಂಶೋಧಕರು ಸಿದ್ಧತೆ ನಡೆಸುತ್ತಿದ್ದಾರೆ.