alex Certify ಕಲ್ಲಂಗಡಿ ಗಾತ್ರದ ದೈತ್ಯ ಗಡ್ಡೆಯನ್ನ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದ ವೈದ್ಯ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಲ್ಲಂಗಡಿ ಗಾತ್ರದ ದೈತ್ಯ ಗಡ್ಡೆಯನ್ನ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದ ವೈದ್ಯ…!

ಜಗತ್ತಿನಲ್ಲೇ ಮುಖದ ಮೇಲೆ ಬೆಳೆದ ಅತ್ಯಂತ ದೊಡ್ಡ ಗಡ್ಡೆಯನ್ನ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿ ತೆಗೆದುಹಾಕಿದ ಬಳಿಕ ಟಿಕ್​ಟಾಕ್​ ಸೇರಿದಂತೆ ಸೋಶಿಯಲ್​ ಮೀಡಿಯಾದ ವಿವಿಧ ವೇದಿಕೆಗಳಲ್ಲಿ ವೈದ್ಯರು ಮೆಚ್ಚುಗೆಯನ್ನ ಗಳಿಸುತ್ತಿದ್ದಾರೆ.

ಹೆಚ್ಚು ಕಡಿಮೆ ಕಲ್ಲಂಗಡಿ ಹಣ್ಣಿನಷ್ಟು ದೊಡ್ಡ ತೂಕದ ಗಡ್ಡೆಯು ವ್ಯಕ್ತಿಯೊಬ್ಬರ ಮುಖದ ಎಡಭಾಗದಲ್ಲಿ ಬೆಳೆದಿತ್ತು. ಇದನ್ನ ಫೇಷಿಯಲ್ ಸರ್ಜನ್​​ ಡಾ. ಗ್ರೇವ್ಸ್ ಎಂಬವರು ಯಶಸ್ವಿಯಾಗಿ ತೆಗೆದುಹಾಕಿದ್ದಾರೆ.

ಈ ಗಡ್ಡೆಯು ಮಾರಣಾಂತಿಕವಾಗಿರದೇ ಇದ್ದರೂ ಸಹ ಇದು ಬೆಳೆದು ಬೆಳೆದು ವ್ಯಕ್ತಿಯ ಮುಖದ ಸಂಪೂರ್ಣ ಎಡಭಾಗವನ್ನ ಆವರಿಸಿಕೊಂಡಿತ್ತು. ಸರಿ ಸುಮಾರು ಒಂದು ವರ್ಷಗಳಿಂದ ಚಾರ್ಲ್ಸ್ ಎಂಬವರು ಈ ಗಡ್ಡೆಯನ್ನ ಹೊಂದಿದ್ದರು. ಹಾಗೂ ಅವರಿಗೆ ಈ ದೈತ್ಯಾಕಾರದ ಗಡ್ಡೆಯಿಂದಾಗಿ ಯಾವುದೇ ಕೆಲಸಗಳನ್ನ ಮಾಡೋದು ತುಂಬಾನೇ ಕಷ್ಟವೆನಿಸುತ್ತಿತ್ತು.

ಆದರೆ ಡಾ. ಗ್ರೇವ್ಸ್​​ರ ನೆರವಿನಿಂದಾಗಿ ಇದೀಗ ಚಾರ್ಲ್ಸ್​ರ ಮುಖ ಮೊದಲಿನಂತೆ ಆಗಿದೆ. ಟಿಕ್​ಟಾಕ್​ನಲ್ಲಿ ಈ ಅನುಭವ ಶೇರ್​ ಮಾಡಿರುವ ಡಾ. ಗ್ರೇವ್ಸ್, ನಾನು ಚಾರ್ಲ್ಸ್​ ಮುಖದಲ್ಲಿನ ಈ ಗಡ್ಡೆಯನ್ನ ನೋಡುತ್ತಿದ್ದಂತೆಯೇ ನನಗೆ ಈ ಶಸ್ತ್ರಚಿಕಿತ್ಸೆ ನಿಜಕ್ಕೂ ಅಚ್ಚರಿಗೊಂಡಿದ್ದೆ. ನಾನು ಉಚಿತವಾಗಿಯೇ ಈ ಗಡ್ಡೆಯನ್ನ ತೆಗೆಯುತ್ತೇನೆ ಎಂದು ಹೇಳಿದ್ದೆ ಎಂದಿದ್ದಾರೆ.

ಶಸ್ತ್ರಚಿಕಿತ್ಸೆ ಸಂಪೂರ್ಣ ಯಶಸ್ವಿಯಾಗಿದ್ದು ಸುರಕ್ಷಿತವಾಗಿ ಗಡ್ಡೆಯನ್ನ ತೆಗೆದುಹಾಕಲಾಗಿದೆ. ಗ್ರೇವ್ಸ್ ಶಸ್ತ್ರಚಿಕಿತ್ಸೆ ಮೊದಲು ಹಾಗೂ ನಂತರದ ಫೋಟೋಗಳನ್ನ ಶೇರ್​ ಮಾಡಿದ್ದಾರೆ. ಈ ಫೋಟೋ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ. ಈ ಗಡ್ಡೆಯು ಸರಿಸುಮಾರು 21 ಕೆಜಿ ತೂಕವನ್ನ ಹೊಂದಿತ್ತು ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...