alex Certify 4.75 ಕೋಟಿ ಮೌಲ್ಯದ ಮೆಡಿಕಲ್ ಬಿಲ್ ಮನ್ನಾ ಮಾಡಿದ ವೈದ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

4.75 ಕೋಟಿ ಮೌಲ್ಯದ ಮೆಡಿಕಲ್ ಬಿಲ್ ಮನ್ನಾ ಮಾಡಿದ ವೈದ್ಯ

ಸುಮಾರು 200 ಕ್ಯಾನ್ಸರ್‌ ರೋಗಿಗಳ ಚಿಕಿತ್ಸಾ ವೆಚ್ಚವನ್ನು ಮನ್ನಾ ಮಡಿದ ಪಾಕಿಸ್ತಾನಿ-ಅಮೆರಿಕನ್ ವೈದ್ಯರೊಬ್ಬರು ತಮ್ಮ ಈ ಹೃದಯವಂತ ನಡೆಯಿಂದ ನೆಟ್ಟಿಗರ ಗೌರವಕ್ಕೆ ಪಾತ್ರರಾಗಿದ್ದಾರೆ.

ಒಟ್ಟಾರೆ $650,000 (4.75 ಕೋಟಿ ರೂಪಾಯಿ) ಮೌಲ್ಯದ ಈ ವೈದ್ಯಕೀಯ ಖರ್ಚನ್ನು ಡಾ. ಒಮರ್‌ ಅತೀಕ್ ಮನ್ನಾ ಮಾಡಿದ್ದಾರೆ. ಈ ಎಲ್ಲಾ ರೋಗಿಗಳೂ ಬಹಳ ಕಾಲದಿಂದ ದುಡ್ಡನ್ನು ಮರುಪಾವತಿ ಮಾಡಲಾರದೇ ಪರದಾಡುತ್ತಿದ್ದರು.

ತಮ್ಮ ಮಾಜಿ ಪೇಷೆಂಟ್ ‌ಗಳಿಂದ ಬಿಲ್‌ ದುಡ್ಡನ್ನು ವಾಪಸ್ ಪಡೆಯುವ ಕೆಲಸ ಮಾಡುತ್ತಿದ್ದ ವೇಳೆ ಅತೀಕ್ ಅವರಿಗೆ 200 ರೋಗಿಗಳ ಪಾಡು ಗೊತ್ತಾಗಿದೆ. ಈ ಬಾಕಿ ಮನ್ನಾದೊಂದಿಗೆ ಎಲ್ಲಾ ರೋಗಿಗಳಿಗೂ ಕ್ರಿಸ್ಮಸ್ ಗ್ರೀಟಿಂಗ್ ಕಳುಹಿಸಿದ ಅತೀಕ್, “ನೀವು ನಮ್ಮಲ್ಲಿ ಚಿಕಿತ್ಸೆ ಪಡೆಯಲು ಬರುತ್ತಿದ್ದಿರಿ ಎಂದು ಹೇಳಲು ಅರ್ಕಾನ್ಸಾಸ್ ಕ್ಯಾನ್ಸರ್‌ ಕ್ಲಿನಿಕ್ ಹೆಮ್ಮೆ ಪಡುತ್ತದೆ. ಬಹುತೇಕ ರೋಗಿಗಳಿಗೆ ಆರೋಗ್ಯ ವಿಮೆಗಳು ಬಿಲ್ ಪಾವತಿ ಮಾಡಿದರೂ ಸಹ, ಕೆಲವೊಂದು ಸಹ-ಪಾವತಿಗಳು ಹೊರೆಯಾಗಬಲ್ಲವು. ದುರದೃಷ್ಟವಶಾತ್‌ ನಮ್ಮ ಆರೋಗ್ಯ ವ್ಯವಸ್ಥೆ ಹೀಗೇ ಕೆಲಸ ಮಾಡುವುದು. ತನ್ನ ಪೇಷೆಂಟ್‌ಗಳು ಬಾಕಿ ಕಟ್ಟಬೇಕಿದ್ದ ಬ್ಯಾಲೆನ್ಸ್ ಎಲ್ಲವನ್ನೂ ಮನ್ನಾ ಮಾಡಲು ಕ್ಲಿನಿಕ್ ನಿರ್ಧರಿಸಿದೆ” ಎಂದು ನೋಟ್‌ ಮೂಲಕ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...