ನೀರಿನ ಮೇಲಿನ ಗಾಳಿಯಲ್ಲಿ ದೋಣಿಗಳು ನಿಜವಾಗಿಯೂ ತೇಲಾಡಬಲ್ಲವೇ..? ನಾವಿಕರು ಹೇಳುವಂತೆ ಭೂತ ನೌಕೆಗಳು ನಿಜವಾಗಿಯೂ ಇದ್ದಾವೆಯೇ? ಇಂಥ ವಿಸ್ಮಯಗಳ ಬಗೆಗಿನ ಪ್ರಶ್ನೆಗಳಿಗೆ ಉತ್ತರಿಸಲು ಯೂಟ್ಯೂಬ್‌ನಲ್ಲಿ ’ದಿ ಆಕ್ಷನ್ ಲ್ಯಾಬ್’ ಹೆಸರಿನ ಚಾನೆಲ್ ಒಂದು ಆರಂಭಗೊಂಡಿದೆ.
2010ರ ವಿಡಿಯೋ ಒಂದನ್ನು ಪೋಸ್ಟ್ ಮಾಡಲಾಗಿದ್ದು, ಅದರಲ್ಲಿ ದೋಣಿಯೊಂದು ತೇಲುತ್ತಿರುವಂತೆ ಭಾಸವಾಗುತ್ತದೆ. ಆದರೆ ಈ ವಿಡಿಯೋವನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಆ ದೋಣಿ ತೇಲುತ್ತಿಲ್ಲ ಎಂದು ತಿಳಿದು ಬರುತ್ತದೆ.
ಪುತ್ತೂರಿನ ಹಾರಾಡಿಯಲ್ಲೊಂದು ‘ಹೃದಯವಿದ್ರಾವಕ’ ಘಟನೆ
ಮನೆಯಲ್ಲಿ ಲೋಹದ ಚೆಂಡೊಂದನ್ನು ಪಾರದರ್ಶಕವಾದ ಆಕ್ರಿಲಿಕ್ ಡಬ್ಬವೊಂದರಲ್ಲಿ ಇಟ್ಟ ನಿರೂಪಕ, ಮರೀಚಿಕೆಗಳು ಹೇಗೆ ಕೆಲಸ ಮಾಡುತ್ತವೆ ಎಂದು ವಿವರಿಸುವ ಮೂಲಕ ಹಾಗೆ ದೋಣಿಗಳು ಗಾಳಿಯಲ್ಲಿ ತೇಲುವಂತೆ ಭಾಸವಾಗಲು ಕಾರಣವೇನೆಂದು ಚೆನ್ನಾಗಿ ವಿವರಿಸಿದ್ದಾರೆ.