ಹುಟ್ಟುವಾಗಲೇ ಅಂಗವಿಕಲನಾಗಿ ಜನನದ ಸಂದರ್ಭದಲ್ಲಿ ತಾಯಿ ಹಾಗೂ ಸಹೋದರಿಯನ್ನ ಕಳೆದುಕೊಂಡಿದ್ದ ಪುಟ್ಟ ಅಲ್ಪಾಕಾ ಪ್ರಾಣಿ ಇದೀಗ ಚಲಿಸುವ ಶಕ್ತಿಯನ್ನ ವಾಪಸ್ ಪಡೆದಿದೆ.
ಈ ದಿವ್ಯಾಂಗ ಮರಿಯನ್ನ ಸ್ನೇಹಿತರ ಜಮೀನಿನಲ್ಲಿ ಮೊದಲ ಬಾರಿಗೆ ಕಂಡ ರೋಂಜಾ ಎಂಬವರ ಹೃದಯ ಮಿಡಿದಿದೆ. ಅವರು ಈ ಪುಟ್ಟ ಮರಿಗೆ ಆಶ್ರಯ ನೀಡಲು ನಿರ್ಧರಿಸಿದ್ರು ಹಾಗೂ ಅಲ್ಪಾಕಾ ಎಲ್ಲಾ ಪ್ರಾಣಿಗಳಂತೆ ನಡೆಯುವಂತಾಗಲು ಏನಾದರೊಂದು ಮಾಡಬೇಕು ಎಂದು ನಿರ್ಧರಿಸಿದ್ರು.
ಜರ್ಮನಿಯ ಫ್ರಂಕ್ಫರ್ಟ್ ನಗರದ ಪುಟ್ಟ ಮನೆಗೆ ಬಂದ ಅಲ್ಪಾಕಾರನ್ನ ಮೊದಲು ಪಶು ವೈದ್ಯರಿಗೆ ತೋರಿಸಲಾಯ್ತು. ಈ ಪಶು ವೈದ್ಯರು ಅಲ್ಪಾಕಾ ಕಾಲು ಇರುವ ಜಾಗದಲ್ಲಿ ಚಕ್ರಗಳನ್ನ ಜೋಡಿಸಿಕೊಟ್ಟಿದ್ದಾರೆ. ಈ ಚಕ್ರಗಳ ಸಹಾಯದಿಂದ ಅಲ್ಪಾಕಾ ಇದೀಗ ಕೊಟ್ಟಿಗೆಯ ತುಂಬೆಲ್ಲಾ ಅನಾಯಾಸವಾಗಿ ಓಡಾಡಲು ಶಕ್ತವಾಗಿದೆ.
ಆಕೆ ತನ್ನ ಸಮಸ್ಯೆಯನ್ನ ತಾನೇ ಬಗೆಹರಿಸಿಕೊಳ್ಳುತ್ತಾಳೆ. ತಾನಾಗೆ ಎದ್ದು ನಿಲ್ಲುತ್ತಾಳೆ ಎಂದು ರೋಂಜಾ ಹೇಳಿದ್ದಾರೆ.
https://www.facebook.com/ReutersUK/videos/2756232691303721/?t=0