alex Certify ಅಧ್ಯಕ್ಷೀಯ ಚುನಾವಣೆಗೆ ಸ್ಫರ್ಧಿಸಲಿದ್ದಾರೆ ಆಫ್ರಿಕಾದ ಕಿಮ್ ಕರ್ದಶಿಯನ್‌ ಪ್ರಿಯಕರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಧ್ಯಕ್ಷೀಯ ಚುನಾವಣೆಗೆ ಸ್ಫರ್ಧಿಸಲಿದ್ದಾರೆ ಆಫ್ರಿಕಾದ ಕಿಮ್ ಕರ್ದಶಿಯನ್‌ ಪ್ರಿಯಕರ

ಆಫ್ರಿಕಾದ ’ಕಿಮ್ ಕರ್ದಶಿಯನ್‌’ ಜೊತೆಗೆ ಸಂಬಂಧ ಹೊಂದಿರುವ ಸಣ್ಣ ಗಾತ್ರದ ಗಾಯಕ ಗ್ರಾಂಡ್‌ ಪಿ, ಗಿನೀ ದೇಶದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಫರ್ಧಿಸಲಿದ್ದಾರಂತೆ.

ಮೌಸ್ಸಾ ಸಂದಿಯಾನಾ ಹೆಸರಿನ ಗ್ರಾಂಡ್‌ ಪಿ, ಪ್ರೋಜಿರಿಯಾದಿಂದ ಬಳಲುತ್ತಿದ್ದು, ಬೆಳವಣಿಗೆ ಕುಂಠಿತದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಗಾಯಕ, ನಟ ಹಾಗೂ ಸಾಮಾಜಿಕ ಜಾಲತಾಣದ ಪರ್ಸನಾಲಿಟಿ ಆಗಿ ಗ್ರಾಂಡ್‌ ಗಿನೀ ದೇಶದಲ್ಲಿ ಖ್ಯಾತನಾಮರಾಗಿದ್ದಾರೆ.

ಐವರಿ ಕೋಸ್ಟ್‌ನ ಪ್ಲಸ್‌ ಸೈಝ್ ಮಾಡೆಲ್‌ ಯುಡೋಕ್ಸಿ ಯಾವೋ ಜೊತೆಗೆ ಗ್ರಾಂಡ್ ರಿಲೇಶನ್‌ಶಿಪ್‌ನಲ್ಲಿದ್ದಾರೆ. ಪ್ರಣಯ ಪಕ್ಷಿಗಳಿಬ್ಬರ ದೇಹದ ಗಾತ್ರಗಳಲ್ಲಿ ಭಾರೀ ಅಂತರವಿದ್ದು, ಇಬ್ಬರ ಈ ಅಫೇರ್‌ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟ್ರೋಲಿಂಗ್ ಮಾಡಲಾಗಿದೆ.

ತನ್ನ ಪ್ರಿಯಕರನ ಚುನಾವಣಾ ಅಭಿಯಾನಕ್ಕೆ ಬೆಂಬಲ ನೀಡುವುದಾಗಿ ತಿಳಿಸಿದ ಯವೋ, “ನನ್ನ ಪತಿಗೆ ಸಂಪೂರ್ಣ ಬೆಂಬಲ ಕೊಡುತ್ತೇನೆ. ಅವರು ಗಿನೀ ಅದೇಶದ ಭವಿಷ್ಯದ ಅಧ್ಯಕ್ಷರು” ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...