alex Certify ಕುಡಿದು ಬೀಳಲಿದ್ದವಳನ್ನು ಹಿಡಿದು ಕೂರಿಸಿದ ಶ್ವಾನ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುಡಿದು ಬೀಳಲಿದ್ದವಳನ್ನು ಹಿಡಿದು ಕೂರಿಸಿದ ಶ್ವಾನ…!

ನೈಟ್ ಔಟ್ ಪಾರ್ಟಿಗಳ ಬಳಿಕ ಸುರಕ್ಷಿತವಾಗಿ ಮನೆ ತಲುಪುವುದು ಹಲವು ಮದ್ಯ ಪ್ರಿಯರಿಗೆ ದೊಡ್ಡ ಸವಾಲು. ಎಲ್ಲೋ ಬೀಳುತ್ತಾರೆ. ಕೆಲವು ಬಾರಿ ಮನೆಗೆ ಬಂದರೂ ಬೆಡ್ ರೂಂ ತಲುಪಿ ಮಲಗಲು ಸಾಧ್ಯವಾಗದ ಹಲವರಿದ್ದಾರೆ. ಅಂಥವರು ಇಂಥ ಅಪರೂಪದ ನಾಯಿಯನ್ನು ಸಾಕಿಕೊಳ್ಳಬೇಕು.

ಹೌದು, ಹಾನಾ ಕ್ಯುಂಟಸ್ ಎಂಬ ಮಹಿಳೆ ಸಾಕಿದ ಜಾಕ್ಸ್ ಎಂಬ ಗೋಲ್ಡನ್ ರಿಟ್ರೀವರ್ ಜಾತಿಯ ನಾಯಿ ಹಾನಾ ರಾತ್ರಿ ಕುಡಿದು ಬಂದು ತೂರಾಡುತ್ತಿದ್ದರೆ ಅವರು ಅಪಾಯವಿಲ್ಲದೆ ಬೆಡ್ ರೂಂ ತಲುಪಲು ನೆರವಾಗುತ್ತದೆ.

ಅವರ ನಾಯಿಯ ಚಲನವಲನಗಳ ಬಗ್ಗೆ ಗಮನ ಇಡಲು ಮನೆಯಲ್ಲಿ ಅಳವಡಿಸಿದ ಪೆಟ್ ಕ್ಯಾಮೆರಾದಲ್ಲಿ ದಾಖಲಾದ ಅಪರೂಪದ ದೃಶ್ಯಗಳನ್ನು ಹಾನಾ ಅವರು ಟಿಕ್ ಟಾಕ್ ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಕೇವಲ ಟಿಕ್ ಟಾಕ್ ಮಾತ್ರವಲ್ಲ. ಫೇಸ್ ಬುಕ್ ಇನ್ಸ್ಟಾಗ್ರಾಂ‌ ಎಲ್ಲೆಡೆ ಸಖತ್ ವೈರಲ್‌ ಆಗಿದೆ. ಮದ್ಯದ ನಶೆಯಲ್ಲಿ ಬೆಡ್ ರೂಂನಲ್ಲಿ ಓಲಾಡುತ್ತ ಬೀಳಲಾಗಿದ್ದ ಹಾನಾ‌ ಅವರನ್ನು ನಾಯಿ ಹಿಡಿದು ಬೆಡ್ ಮೇಲೆ ಕೂರಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...