ನವಜಾತ ಶಿಶುವಿಗೆ ಆಹಾರ ನೀಡೋದು ಬಲು ಕಷ್ಟದ ಕೆಲಸ. ಅದರಲ್ಲೂ ತಾಯಿಯನ್ನ ಕಳೆದುಕೊಂಡ ಕಂದಮ್ಮಗಳಿಗೆ ಹಾಲುಣಿಸೋದು ಅಂದರೆ ಸುಲಭದ ಮಾತಲ್ಲ.
ಇದೇ ರೀತಿ ಕಷ್ಟದಲ್ಲಿ ಚೀನಾ ದೇಶದ ತಂದೆಯೊಬ್ಬ ತಾಯಿಯ ಗೈರಿನ ನಡುವೆಯೂ ಮಗುವಿಗೆ ಹಾಲುಣಿಸಲು ತಂತ್ರಜ್ಞಾನದ ಮೊರೆ ಹೋಗಿದ್ದಾರೆ.
ಚೀನಾದ ಜಿಯಾಂಗ್ಕ್ಸಿ ಪ್ರಾಂತ್ಯದ ವುವಾನ್ ಕೌಂಟಿಯ ನಿವಾಸಿ ಮಗುವಿಗೆ ಹಾಲುಣಿಸಲು ಸ್ಮಾರ್ಟ್ ಟ್ಯಾಬ್ ಸಹಾಯ ಪಡೆದಿದ್ದಾರೆ. ಟೇಪ್ ಸಹಾಯದಿಂದ ಮುಖಕ್ಕೆ ಟ್ಯಾಬ್ ಅಂಟಿಸಿಕೊಂಡ ತಂದೆ ಅದರಲ್ಲಿ ತನ್ನ ಪತ್ನಿಯ ಫೊಟೋವನ್ನ ಹಾಕಿದ್ದಾರೆ.
ಟ್ಯಾಬ್ನಲ್ಲಿ ತಾಯಿಯ ಮುಖ ನೋಡಿದ ಕಂದಮ್ಮ ಹಾಲನ್ನ ಕುಡಿದಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸೌಂಡ್ ಮಾಡ್ತಿದೆ.
https://youtu.be/9lTN6UPudoQ?t=2