ಆನ್ಲೈನ್ನಲ್ಲಿ ಫುಡ್ ಡೆಲಿವರಿ ಮಾಡುವ ವೇಳೆ ಡೆಲಿವರಿ ಬಾಯ್ಗಳೇ ಆಹಾರವನ್ನ ಕದ್ದು ತಿನ್ನುವ ಸಾಕಷ್ಟು ಪ್ರಕರಣಗಳು ಈಗಾಗಲೇ ಬೆಳಕಿಗೆ ಬಂದಿದೆ. ಇದೀಗ ಇದೇ ಸಾಲಿಗೆ ಇನ್ನೊಂದು ವಿಡಿಯೋ ಸೇರಿದ್ದು ಇದರಲ್ಲಿ ಗ್ರಾಹಕರು ಆರ್ಡರ್ ಮಾಡಿದ್ದ ಮ್ಯಾಕ್ಡಿಯ ತಿನಿಸುಗಳನ್ನ ರದ್ದು ಮಾಡಿದ ಬಳಿಕ ಡೆಲಿವರಿ ಬಾಯ್ ರದ್ದು ಮಾಡಿದ ಆಹಾರವನ್ನ ತಾನೇ ಸೇವಿಸಿದ್ದಾನೆ ಎಂದು ಗ್ರಾಹಕ ಆರೋಪಿಸಿದ್ದಾರೆ.
ಲಂಡನ್ನಲ್ಲಿ ಮಹಿಳೆಯೊಬ್ಬರು ಆರ್ಡರ್ ಮಾಡಿದ ಆಹಾರವನ್ನ ರದ್ದು ಮಾಡಿದ ಡ್ರೈವರ್ ತನ್ನ ಮನೆಯ ಮುಂದೇ ಕೂತು ಎಲ್ಲಾ ತಿಂಡಿಯನ್ನ ತಿಂದಿದ್ದಾನೆ ಎಂದು ಆರೋಪಿಸಲಾಗಿದೆ. ಆಕೆಯ ಸಹೋದರ ಟ್ವಿಟರ್ನಲ್ಲಿ ವಿಡಿಯೋ ಶೇರ್ ಮಾಡಿದ್ದಾರೆ.
ಈ ವಿಡಿಯೋ ನೋಡಿದ ಟ್ವೀಟಿಗರು……ಆತ ನಿಮ್ಮ ಮನೆಗೆ ತಲುಪಬೇಕಾದ ಆಹಾರವನ್ನೇ ರದ್ದು ಮಾಡಿ ನಿಮ್ಮ ಮನೆಗೆ ಮುಂದೆಯೇ ತಿಂದಿರೋಕೆ ಸಾಧ್ಯವಿಲ್ಲ. ಬಹುಶಃ ಇದು ಬೇರೆ ಡೆಲಿವರಿ ಬಾಯ್ ಇರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
https://youtu.be/88JS-fsrgtE?t=1