alex Certify ಹೊಸ ಟ್ರೆಂಡ್​ ಸೆಟ್​ ಮಾಡಿದೆ ನೀರಿನ ಬೋಂಡಾ..! ಹುಬ್ಬೇರಿಸುವಂತಿದೆ ತಯಾರಿಸುವ ವಿಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ಟ್ರೆಂಡ್​ ಸೆಟ್​ ಮಾಡಿದೆ ನೀರಿನ ಬೋಂಡಾ..! ಹುಬ್ಬೇರಿಸುವಂತಿದೆ ತಯಾರಿಸುವ ವಿಧಾನ

ಕೊರೊನಾ ವೈರಸ್ ಸಾಂಕ್ರಾಮಿಕದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿಚಿತ್ರ ತಿನಿಸುಗಳು ವೈರಲ್​ ಆಗಿದ್ದವು. ಚಾಕಲೇಟ್​ ಮ್ಯಾಗಿ, ಮೆಕ್​ಡಿ ಐಸ್​ ಕ್ರೀಂ, ಸ್ಟ್ರಾಬೆರ್ರಿ ಪಿಜ್ಜಾ, ನ್ಯುಟೆಲ್ಲಾ ಬಿರಿಯಾನಿ, ಚವನ್​ಪ್ರಾಶ್​ ಐಸ್​ಕ್ರೀಂ ಅಥವಾ ಬೆಣ್ಣೆ ಚಹ ಹೀಗೆ ಸಾಕಷ್ಟು ಚಿತ್ರ ವಿಚಿತ್ರ ಆಹಾರಗಳು ಸೋಶಿಯಲ್​ ಮೀಡಿಯಾದಲ್ಲಿ ನೆಟ್ಟಿಗರ ಹುಬ್ಬೇರಿಸಿದೆ.

ಇದೀಗ ನೀರಿನ ಬೋಂಡಾ ಕೂಡ ಈ ಲಿಸ್ಟಿಗೆ ಸೇರಿಕೊಂಡಿದೆ. ಅಂದಹಾಗೆ ಇದೇನು ಬಿಸಿ ನೀರಿಗೆ ಇಟ್ಟ ಮತ್ತೊಂದು ಹೆಸರು ಅಂತಾ ಭಾವಿಸಬೇಡಿ. 2016ರಲ್ಲಿ ಯುಟ್ಯೂಬರ್​​ ಜೋನಾಥನ್​ ಮಾರ್ಕಸ್​ ಎಂಬವರು ನೀರಿಗೆ ಹಿಟ್ಟು, ಮೊಟ್ಟೆ ಹಾಗೂ ಬ್ರೆಡ್​ ಕ್ರಂಬ್ಸ್​ಗಳನ್ನ ಹಾಕಿ ಎಣ್ಣೆಯಲ್ಲಿ ಕರಿಯುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ಇದಾದ ಐದು ವರ್ಷಗಳ ಬಳಿಕ ಇದೀಗ ಈ ಹಳೆ ಟ್ರೆಂಡ್​ ಮತ್ತೊಮ್ಮೆ ಸುದ್ದಿಯಲ್ಲಿದೆ.

ಯುಟ್ಯೂಬರ್​ ಹಾಗೂ ಕೆಮಿಕಲ್​ ಇಂಜಿನಿಯರ್​ ಜೇಮ್ಸ್ ಆರ್ಗಿಲ್​, ಡಿಸೆಂಬರ್​ 2020ರಲ್ಲಿ ನೀರನ್ನ ಡೀಪ್​ ಫ್ರೈ ಮಾಡಿದ್ದಾರೆ. ಕ್ಯಾಲ್ಸಿಯಂ ಆಲ್ಜಿನೇಟ್ ಎಂಬ ಜಿಲಾಟಿನ್​ ರೀತಿಯ ವಸ್ತುವನ್ನ ಕ್ಯಾಲ್ಸಿಯಂ ಕ್ಲೊರೈಡ್​ ದ್ರಾವಣ ಹಾಗೂ ಸೋಡಿಯಂ ಅಲ್ಜಿನೇಟ್​ನಿಂದ ತಯಾರಿಸಿ ನೀರಿನೊಂದಿಗೆ ಸೇರಿಸಿ ಘನೀಕರಿಸಿದ್ದಾರೆ.

ನೀರು ಹಾಗೂ ಎಣ್ಣೆಯನ್ನ ಮಿಶ್ರಣ ಮಾಡೋದು ಬಹಳ ಅಪಾಯಕಾರಿ ಕೆಲಸವಾಗಿದ್ದರೂ ಸಹ ಜೇಮ್ಸ್ ತಮ್ಮ ಮೊದಲ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ.

ನಿಮ್ಮ ಆಹಾರದಲ್ಲಿ ಹೆಚ್ಚು ಕ್ಯಾಲರಿಯನ್ನ ಸೇರಿಸಲು ಇಚ್ಛಿಸದೇ ಹೋದಲ್ಲಿ ನೀವು ಈ ನೀರಿನ ಬೋಂಡಾವನ್ನ ತಿನ್ನಬಹದು ಎಂದು ಜೇಮ್ಸ್ ಆರ್ಗಿಲ್​ ಹೇಳಿದ್ದಾರೆ. ಇದನ್ನ ಹಿಟ್ಟು. ಮೊಟ್ಟೆ ಹಾಗೂ ಬ್ರೆಡ್​ ಕ್ರಂಬ್​​ನಲ್ಲಿ ಲೇಪನ ಮಾಡಿ ಎಣ್ಣೆಯಲ್ಲಿ ಕರಿದಿದ್ದಾರೆ.

ಈ ಹೊಸ ತಿಂಡಿಗೆ ಜೇಮ್ಸ್ ರಾ ಜೆಲ್ಲಿ ಫಿಶ್​ ಎಂದು ಕರೆದಿದ್ದಾರೆ. ಅಂದಹಾಗೆ ಇದೇನು ಅಂತಾ ವಿಶೇಷ ರುಚಿಯನ್ನ ಹೊಂದಿಲ್ಲ. ಪರಿಮಳವೂ ಇರೋದಿಲ್ಲ. ಇದೊಂದು ಸೌಮ್ಯ ರುಚಿಯನ್ನ ಹೊಂದಿರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...