alex Certify ಸೂರ್ಯನ ಮುಂದೆ ಬಂದ ಚಂದ್ರ…? ಇಲ್ಲಿದೆ ವೈರಲ್‌ ವಿಡಿಯೋ ಹಿಂದಿನ ಅಸಲಿ ಸತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೂರ್ಯನ ಮುಂದೆ ಬಂದ ಚಂದ್ರ…? ಇಲ್ಲಿದೆ ವೈರಲ್‌ ವಿಡಿಯೋ ಹಿಂದಿನ ಅಸಲಿ ಸತ್ಯ

ಸೂರ್ಯನಿಗೆ ಅಡ್ಡಲಾಗಿ ಬಂದಿರುವ ಚಂದ್ರನದ್ದು ಎಂದು ಹೇಳಲಾಗುವ ವಿಡಿಯೋವೊಂದು ವೈರಲ್ ಆಗಿದೆ. ನಾವು ಇಲ್ಲಿವರೆಗೂ ನೋಡಿದ್ದಕ್ಕಿಂತ ಬಹಳ ಹತ್ತಿರದಿಂದ ಚಂದ್ರ ಕಾಣುವಂತೆ ಸೆರೆ ಹಿಡಿಯಲಾದ ಈ ವಿಡಿಯೋವನ್ನು ಆರ್ಕ್ಟಿಕ್ ವೃತ್ತದ ಬಳಿ ಸೆರೆ ಹಿಡಿಯಲಾಗಿದ್ದು ಎಂಬಂತೆ ಸಾಮಾಜಿಕ ಜಾಲತಾಣದ ಅನೇಕ ಪೋರ್ಟಲ್‌ಗಳಲ್ಲಿ ತೋರಲಾಗಿದೆ.

ರೈತ ಸಮುದಾಯಕ್ಕೆ ಮತ್ತೊಂದು ಗುಡ್ ನ್ಯೂಸ್: ಅರ್ಜಿ ಇಲ್ಲದೇ ಖಾತೆಗೆ ಪರಿಹಾರ ಹಣ ಜಮಾ

“ಈ ಜಾಗದಲ್ಲಿ ದಿನದ ವೇಳೆ ಕುಳಿತಂತೆ ಊಹಿಸಿಕೊಳ್ಳಿ (ಆರ್ಕ್ಟಿಕ್‌ನಲ್ಲಿ ರಷ್ಯಾ ಹಾಗೂ ಕೆನಡಾದ ನಡುವೆ). ಚಂದ್ರನು ಈ ಗಾತ್ರದಲ್ಲಿ ಕಾಣಿಸಿಕೊಂಡು 30 ಸೆಕೆಂಡ್‌ಗಳಲ್ಲಿ ಕಾಣದಂತಾಗುತ್ತಾನೆ ಹಾಗೂ ಮಾರ್ಗ ಮಧ್ಯೆ ಐದು ಸೆಕೆಂಡ್‌ಗಳ ಮಟ್ಟಿಗೆ ಸೂರ್ಯನನ್ನು ಬ್ಲಾಕ್ ಮಾಡುತ್ತಾನೆ” ಎಂದು ಅರುಣ್ ದೇಶಪಾಂಡೆ ಹೆಸರಿನ ಟ್ವಿಟ್ಟಿಗರೊಬ್ಬರು ಈ ವಿಡಿಯೋ ಹಂಚಿಕೊಂಡಿದ್ದಾರೆ.

ಬ್ರೇಕ್‌ ಫೇಲ್‌ ಆಗಿದ್ದ ಲಾರಿಯನ್ನು 3 ಕಿಮೀ ʼರಿವರ್ಸ್‌ʼನಲ್ಲಿ ಓಡಿಸಿದ ಚಾಲಕ…!

ವಾಸ್ತವ ಸಂಗತಿಗಳನ್ನು ಪರಿಶೀಲನೆ ಮಾಡುವ ’ಹೋಕ್ಸ್‌ಐ’ ಹೆಸರಿನ ಟ್ವಿಟರ್‌ ಪುಟವೊಂದು ಈ ವಿಡಿಯೋವನ್ನು ಎಡಿಟ್ ಮಾಡಲಾಗಿದ್ದು ಎಂದು ಸ್ಪಷ್ಟಪಡಿಸಿದ್ದು, ಇದೇ ವಿಡಿಯೋವನ್ನು ಮೇ 17ರಂದು, ಚಂದ್ರ ಗ್ರಹಣ ಸಂಭವಿಸುವ ಕೆಲ ದಿನಗಳ ಮುನ್ನ, ಟಿಕ್‌ಟಾಕ್ ಕಲಾವಿದರೊಬ್ಬರು ಶೇರ್‌ ಮಾಡಿದ್ದರು ಎಂದು ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...