ಸೂರ್ಯನಿಗೆ ಅಡ್ಡಲಾಗಿ ಬಂದಿರುವ ಚಂದ್ರನದ್ದು ಎಂದು ಹೇಳಲಾಗುವ ವಿಡಿಯೋವೊಂದು ವೈರಲ್ ಆಗಿದೆ. ನಾವು ಇಲ್ಲಿವರೆಗೂ ನೋಡಿದ್ದಕ್ಕಿಂತ ಬಹಳ ಹತ್ತಿರದಿಂದ ಚಂದ್ರ ಕಾಣುವಂತೆ ಸೆರೆ ಹಿಡಿಯಲಾದ ಈ ವಿಡಿಯೋವನ್ನು ಆರ್ಕ್ಟಿಕ್ ವೃತ್ತದ ಬಳಿ ಸೆರೆ ಹಿಡಿಯಲಾಗಿದ್ದು ಎಂಬಂತೆ ಸಾಮಾಜಿಕ ಜಾಲತಾಣದ ಅನೇಕ ಪೋರ್ಟಲ್‌ಗಳಲ್ಲಿ ತೋರಲಾಗಿದೆ.
ರೈತ ಸಮುದಾಯಕ್ಕೆ ಮತ್ತೊಂದು ಗುಡ್ ನ್ಯೂಸ್: ಅರ್ಜಿ ಇಲ್ಲದೇ ಖಾತೆಗೆ ಪರಿಹಾರ ಹಣ ಜಮಾ
“ಈ ಜಾಗದಲ್ಲಿ ದಿನದ ವೇಳೆ ಕುಳಿತಂತೆ ಊಹಿಸಿಕೊಳ್ಳಿ (ಆರ್ಕ್ಟಿಕ್‌ನಲ್ಲಿ ರಷ್ಯಾ ಹಾಗೂ ಕೆನಡಾದ ನಡುವೆ). ಚಂದ್ರನು ಈ ಗಾತ್ರದಲ್ಲಿ ಕಾಣಿಸಿಕೊಂಡು 30 ಸೆಕೆಂಡ್‌ಗಳಲ್ಲಿ ಕಾಣದಂತಾಗುತ್ತಾನೆ ಹಾಗೂ ಮಾರ್ಗ ಮಧ್ಯೆ ಐದು ಸೆಕೆಂಡ್‌ಗಳ ಮಟ್ಟಿಗೆ ಸೂರ್ಯನನ್ನು ಬ್ಲಾಕ್ ಮಾಡುತ್ತಾನೆ” ಎಂದು ಅರುಣ್ ದೇಶಪಾಂಡೆ ಹೆಸರಿನ ಟ್ವಿಟ್ಟಿಗರೊಬ್ಬರು ಈ ವಿಡಿಯೋ ಹಂಚಿಕೊಂಡಿದ್ದಾರೆ.
ಬ್ರೇಕ್ ಫೇಲ್ ಆಗಿದ್ದ ಲಾರಿಯನ್ನು 3 ಕಿಮೀ ʼರಿವರ್ಸ್ʼನಲ್ಲಿ ಓಡಿಸಿದ ಚಾಲಕ…!
ವಾಸ್ತವ ಸಂಗತಿಗಳನ್ನು ಪರಿಶೀಲನೆ ಮಾಡುವ ’ಹೋಕ್ಸ್‌ಐ’ ಹೆಸರಿನ ಟ್ವಿಟರ್ ಪುಟವೊಂದು ಈ ವಿಡಿಯೋವನ್ನು ಎಡಿಟ್ ಮಾಡಲಾಗಿದ್ದು ಎಂದು ಸ್ಪಷ್ಟಪಡಿಸಿದ್ದು, ಇದೇ ವಿಡಿಯೋವನ್ನು ಮೇ 17ರಂದು, ಚಂದ್ರ ಗ್ರಹಣ ಸಂಭವಿಸುವ ಕೆಲ ದಿನಗಳ ಮುನ್ನ, ಟಿಕ್‌ಟಾಕ್ ಕಲಾವಿದರೊಬ್ಬರು ಶೇರ್ ಮಾಡಿದ್ದರು ಎಂದು ತಿಳಿಸಿದೆ.