ಡೈರಿ ಕೇಂದ್ರದಲ್ಲಿನ ಬಾತ್ ಟಬ್ನಲ್ಲಿ ಮಲಗಿ ಹಾಲಿನಿಂದ ಸ್ನಾನ ಮಾಡಿದವನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಡೈರಿ ಕೆಲಸಗಾರನನ್ನ ಪೊಲೀಸರು ಬಂಧಿಸಿದ ಘಟನೆ ಟರ್ಕಿಯಲ್ಲಿ ನಡೆದಿದೆ. ಉಗುರ್ ಟಟ್ಗಟ್ ಎಂಬಾತ ನೀರಿನ ಬದಲು ಹಾಲಿನಿಂದ ತುಂಬಿದ್ದ ಟಬ್ನಲ್ಲಿ ಮಲಗಿದ್ದ. ಅಲ್ಲದೇ ಚೊಂಬಿನಲ್ಲಿ ಹಾಲನ್ನ ತೆಗೆದುಕೊಂಡು ತಲೆಯನ್ನ ತೊಳೆದುಕೊಂಡಿದ್ದ.
ವಿಡಿಯೋ ವೈರಲ್ ಆದ ಬಳಿಕ ತನಿಖೆ ಕೈಗೆತ್ತಿಕೊಂಡ ಸ್ಥಳೀಯ ಠಾಣೆ ಪೊಲೀಸರು ಈತನನ್ನ ಬಂಧಿಸೋದ್ರ ಜೊತೆಗೆ ಹಾಲಿನ ಕೇಂದ್ರ ಹಾಗೂ ಇಬ್ಬರು ಕಾರ್ಮಿಕರಿಗೆ ದಂಡ ವಿಧಿಸಿದ್ದಾರೆ. ಹಾಗೂ ಡೈರಿಯನ್ನ ಸೀಝ್ ಮಾಡಲಾಗಿದೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಟರ್ಕಿಯ ಕೃಷಿ ಹಾಗೂ ಅರಣ್ಯ ಸಚಿವಾಲಯ, ಕೀನ್ಯಾದಲ್ಲಿನ ಡೈರಿ ಕೇಂದ್ರವೊಂದರಲ್ಲಿ ಆಹಾರ ಸುರಕ್ಷತೆಯನ್ನ ಕಡೆಗಣಿಸಿದ್ದು ಕಂಡುಬಂದಿದೆ, ಈ ಸಂಬಂಧ ಸೂಕ್ತ ಕ್ರಮ ಕೈಗೊಂಡಿದ್ದೇವೆ ಅಂತಾ ಹೇಳಿದೆ.