alex Certify ತಂದೆ ಮಾಡಿದ ತಮಾಷೆಗೆ ಗಾಬರಿಯಾದ್ಲು ಮಗಳು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಂದೆ ಮಾಡಿದ ತಮಾಷೆಗೆ ಗಾಬರಿಯಾದ್ಲು ಮಗಳು…!

ಬ್ರಿಟನ್: ಕರೋನಾ ವೈರಸ್ ನಿಂದಾಗಿ ಶಾಲೆಗಳು ಲಾಕ್‌ ಡೌನ್ ಆಗಿರುವ ಕಾರಣ ಮಕ್ಕಳು ಮನೆಯಿಂದಲೇ ಅಭ್ಯಾಸ ಮಾಡುವಂತಾಗಿದೆ. ಮಕ್ಕಳು ಇದನ್ನು ಎಂಜಾಯ್ ಮಾಡುತ್ತಿದ್ದರೆ ಪಾಲಕರ ಸ್ಥಿತಿ ಹೇಳತೀರದು.

ಬ್ರಿಟನ್ ನ ನಿವಾಸಿ ಲಿಯಮ್ ಶೇವಿಟ್ಜ್ ಇಬ್ಬರು ಹೆಣ್ಣು ಮಕ್ಕಳ ತಂದೆ. ಮನೆಯಲ್ಲೇ ಕುಳಿತು ಆನ್ಲೈನ್ ತರಗತಿಗಳಲ್ಲಿ ತಲ್ಲೀನರಾಗಿದ್ದ ಇಬ್ಬರನ್ನು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ರವರ ಆದೇಶ ಎಂದು ತಾವೇ ತಯಾರಿಸಿದ ನಕಲಿ ಪತ್ರ ತೋರಿಸಿ ತಮ್ಮ ಮಕ್ಕಳನ್ನು ಮೂರ್ಖರನ್ನಾಗಿಸಿದ್ದಾರೆ.

ಪತ್ರದಲ್ಲಿ ಇದ್ದ ವಿಷಯ ಇಬ್ಬರು ಓದಿ ಗಾಬರಿಗೊಂಡಿದ್ದಾರೆ. ಏಕೆಂದರೆ ಪತ್ರದಲ್ಲಿ “ನಾವು 6 ತಿಂಗಳವರೆಗೆ ವಾರದ 7 ದಿನವೂ ಶಾಲೆಗಳನ್ನು ನಡೆಸಲು ತೀರ್ಮಾನಿಸಿದ್ದೇವೆ” ಎಂದು ಬರೆಯಲಾಗಿತ್ತು.

ವಿಶೇಷವೆಂದರೆ ಪ್ರಧಾನಿಯ ಆದೇಶ ಪತ್ರವನ್ನು ಸಹಿ ಮತ್ತು ಸ್ಟ್ಯಾಂಪ್ ಎಲ್ಲವನ್ನೂ ಯಥಾವತ್ತಾಗಿ ನಕಲು ಮಾಡಿದ್ದು, ಎಲ್ಲಿಯೂ ಪತ್ರ ನಕಲಿ ಎಂದು ಇಬ್ಬರು ಮಕ್ಕಳಿಗೆ ತಿಳಿಯದಂತೆ ತಯಾರಿಸಿದ್ದರು. ತಂದೆ, ತಮ್ಮ ಮಕ್ಕಳನ್ನು ಯಾಮಾರಿಸಿ ಖುಷಿ ಪಟ್ಟರು.

ಪತ್ರ ನೋಡಿ ತಲೆಬಿಸಿ ಮಾಡಿಕೊಂಡ ಒಬ್ಬ ಮಗಳು ಮೊದಲು ತನ್ನ ಸ್ನೇಹಿತೆಯರಿಗೆ ಫೋನ್ ಮಾಡಿ ನಿಜವೇ ಎಂದು ತಿಳಿದುಕೊಳ್ಳಲು ಪ್ರಯತ್ನಿಸಿ ವಿಫಲಳಾಗಿದ್ದಳು. ನಂತರ ಜಾಲತಾಣಗಳಲ್ಲಿ ಸತ್ಯಾಂಶ ತಿಳಿಯಲು ಪ್ರಯತ್ನಿಸಿದ್ದಳು. ತಂದೆಯು ಫ್ರಾಂಕ್ ಮಾಡಲು ಆರಿಸಿಕೊಂಡ ವಿಷಯ ಮತ್ತು ನಕಲು ಮಾಡಲು ಮಾಡಿದ ವಿಧಾನ ಅಚ್ಚರಿ ಮೂಡಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...