alex Certify ಮಗ ಮಾಡಿದ ಕಾರ್ಯ ನೋಡಿ ಭಾವುಕರಾಗಿ ಕಣ್ಣೀರಿಟ್ಟ ತಂದೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗ ಮಾಡಿದ ಕಾರ್ಯ ನೋಡಿ ಭಾವುಕರಾಗಿ ಕಣ್ಣೀರಿಟ್ಟ ತಂದೆ

24 ವರ್ಷದ ಮಗ ತನ್ನ ತಂದೆಯ ಎಲ್ಲಾ ಸಾಲಗಳನ್ನ ತೀರಿಸಿದ ಬಳಿಕ ತಂದೆಗೆ ವಿಶ್ರಾಂತಿ ತೆಗೆದುಕೊಳ್ಳುವಂತೆ ಹೇಳಿದ್ದು ತಂದೆ – ಮಗನ ಈ ಅತ್ಯಮೂಲ್ಯ ಕ್ಷಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಕಣ್ಣಂಚನ್ನ ಒದ್ದೆ ಮಾಡಿದೆ. ಜೆಮ್ಮಿ ನೈಲ್ಯಾಂಡ್​ ಎಂಬವರು ಟಿಕ್​ಟಾಕ್​​ನಲ್ಲಿ ಈ ವಿಡಿಯೋವನ್ನ ಪೋಸ್ಟ್ ಮಾಡಿದ್ದಾರೆ.

ಜೆಮ್ಮಿ ಕ್ಯಾಮರಾಗೆ ಮೊದಲು ಕೀಲಿಯೊಂದನ್ನ ತೋರಿಸ್ತಾರೆ. ಬಳಿಕ ಕ್ಯಾಮರಾ ಸಮೇತ ತಮ್ಮ ತಂದೆ ರಿಚರ್ಡ್​ ರೂಮೊಳಕ್ಕೆ ಹೋಗುತ್ತಾರೆ. ಈ ಕೀಯನ್ನ ತಂದೆಯ ಕೈಗಿಡುವ ಮುನ್ನ ನಿಮ್ಮ ಎಲ್ಲಾ ಸಾಲಗಳನ್ನ, ಅಡಮಾನಗಳನ್ನ ನಾನು ತೀರಿಸಿದ್ದೇನೆ ಎಂದು ಹೇಳಿದ್ದಾನೆ.

ಹೀಗ್ಯಾಕೆ ಮಾಡಿದೆ ಎಂದು ರಿಚರ್ಡ್ ಪ್ರಶ್ನೆ ಮಾಡುತ್ತಿದ್ದಂತೆಯೇ ಉತ್ತರಿಸಿದ ಜೆಮ್ಮಿ, ನೀವೀಗ ಈ ಮನೆಯ ಸಂಪೂರ್ಣ ಒಡೆತನವನ್ನ ಹೊಂದಿದ್ದೀರಿ. ನಿಮ್ಮ ಇಡೀ ಜೀವನವನ್ನ ದುಡಿಮೆಗೇ ಮೀಸಲಿಟ್ಟಿದ್ದೀರಾ. ನೀವೀಗ ನಿವೃತ್ತಿ ಪಡೆಯಬಹುದು ಎಂದು ಹೇಳಿದ್ದಾರೆ.

ಇದನ್ನೆಲ್ಲ ನಂಬಲಾಗದ ರಿಚರ್ಡ್​ರ ಕಣ್ಣಾಲೆಗಳು ತುಂಬಿ ಹೋಗಿದ್ದವು. ಅಲ್ಲದೇ ನೀವು ಈ ವಿಶ್ವದಲ್ಲೇ ಅತ್ಯುತ್ತಮ ಮಗ ಎಂದು ಹಾಡಿ ಹೊಗಳಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...