
ಜೆಮ್ಮಿ ಕ್ಯಾಮರಾಗೆ ಮೊದಲು ಕೀಲಿಯೊಂದನ್ನ ತೋರಿಸ್ತಾರೆ. ಬಳಿಕ ಕ್ಯಾಮರಾ ಸಮೇತ ತಮ್ಮ ತಂದೆ ರಿಚರ್ಡ್ ರೂಮೊಳಕ್ಕೆ ಹೋಗುತ್ತಾರೆ. ಈ ಕೀಯನ್ನ ತಂದೆಯ ಕೈಗಿಡುವ ಮುನ್ನ ನಿಮ್ಮ ಎಲ್ಲಾ ಸಾಲಗಳನ್ನ, ಅಡಮಾನಗಳನ್ನ ನಾನು ತೀರಿಸಿದ್ದೇನೆ ಎಂದು ಹೇಳಿದ್ದಾನೆ.
ಹೀಗ್ಯಾಕೆ ಮಾಡಿದೆ ಎಂದು ರಿಚರ್ಡ್ ಪ್ರಶ್ನೆ ಮಾಡುತ್ತಿದ್ದಂತೆಯೇ ಉತ್ತರಿಸಿದ ಜೆಮ್ಮಿ, ನೀವೀಗ ಈ ಮನೆಯ ಸಂಪೂರ್ಣ ಒಡೆತನವನ್ನ ಹೊಂದಿದ್ದೀರಿ. ನಿಮ್ಮ ಇಡೀ ಜೀವನವನ್ನ ದುಡಿಮೆಗೇ ಮೀಸಲಿಟ್ಟಿದ್ದೀರಾ. ನೀವೀಗ ನಿವೃತ್ತಿ ಪಡೆಯಬಹುದು ಎಂದು ಹೇಳಿದ್ದಾರೆ.
ಇದನ್ನೆಲ್ಲ ನಂಬಲಾಗದ ರಿಚರ್ಡ್ರ ಕಣ್ಣಾಲೆಗಳು ತುಂಬಿ ಹೋಗಿದ್ದವು. ಅಲ್ಲದೇ ನೀವು ಈ ವಿಶ್ವದಲ್ಲೇ ಅತ್ಯುತ್ತಮ ಮಗ ಎಂದು ಹಾಡಿ ಹೊಗಳಿದ್ದಾರೆ.